ಒಂದು ಎಕರೆಯಲ್ಲಿ 129 ತೆಂಗು!

0 minutes, 0 seconds Read

*ಸಾಮಾನ್ಯವಾಗಿ ತೆಂಗಿನ ಗಿಡವನ್ನು ಜಮೀನಿನಲ್ಲಿ ತೋಟ ಮಾಡುವಾಗ 25*25 ಅಡಿ,30*30 ಅಡಿ,36*36 ಅಡಿ ಅಂತರದಲ್ಲಿ ಚೌಕಕಾರದಲ್ಲಿ ನೆಡುವ ಪದ್ಧತಿ ಅನುಸರಿಸಿಕೊಂಡು ಬರಲಾಗಿದೆ.ಈ ಅಂತರದಲ್ಲಿ ತೆಂಗಿನ ಗಿಡವನ್ನು ಹಾಕಿದಾಗ ಸುಮಾರು ಒಂದು ಎಕರೆಗೆ 40 ರಿಂದ 50 ಗಿಡವನ್ನು ಹಾಕಬಹುದು.ಈ ಮಾದರಿಯಲ್ಲಿ ಹಾಕಿದಾಗ ತೆಂಗಿನ ಗಿಡದ ವಯಸ್ಸು 8 ವರ್ಷ ಕಳೆದ ನಂತರ ತೆಂಗಿನ ತೋಟದಲ್ಲಿ ನೆರಳು ಜಾಸ್ತಿಯಾಗುವುದರಿಂದ ತೆಂಗಿನ ಸಾಲಿನ ಮಧ್ಯ ಧಾನ್ಯ, ಬೇಳೆಕಾಳು, ಕಬ್ಬು,ಜೋಳ ಇನ್ನಿತರೇ ಬೆಳೆಗಳನ್ನು ಬೆಳೆಯಲಾಗುವುದಿಲ್ಲ.ತೆಂಗಿನ ತೋಟ ಮಾಡಲು ಬಹುತೇಕ ರೈತರು ಆಸಕ್ತಿವಹಿಸದೇ ಹೋದದ್ದು ತೆಂಗು ಹಾಕಿದ ನಂತರ ಇತರೆ ಬೆಳೆ ಹಾಕಲಾಗುವುದಿಲ್ಲ ಎಂಬ ಕಾರಣಕ್ಕಾಗಿ.ತೆಂಗಿನ ತೋಟದಲ್ಲಿ ತೆಂಗು ಗರಿಷ್ಠ ಶೇ 30% ಭೂಮಿ ಉಪಯೋಗ ಮಾಡಿಕೊಳ್ಳುತ್ತದೆ,ಉಳಿದ ಶೇ 70% ಭೂಮಿಯಲ್ಲಿ ಇತರೆ ಬೆಳೆ ಬೆಳೆಯುವುದು ರೈತರಿಗೆ ಮತ್ತು ಉತ್ಪಾದಕತೆ ದೃಷ್ಟಿಯಲ್ಲಿ ಅನಿವಾರ್ಯ ಕೂಡ.

*ತೆಂಗನ್ನು 40*40 ಅಡಿ ಅಥವಾ ಮೇಲ್ಪಟ್ಟು ಅಳತೆಯಲ್ಲಿ ಚೌಕಕಾರದಲ್ಲಿ ಹಾಕಿಕೊಂಡಾಗ ಎಕರೆಗೆ ಸುಮಾರು 25 ರಿಂದ 30 ಗಿಡ ಹಾಕಬಹುದು ಮತ್ತು ತೆಂಗಿನ ಸಾಲಿನ ನಡುವೆ ಯಾವುದೇ ರೀತಿಯ ಬೆಳೆ ಮಾಡಬಹುದು. ಒಂದು ಎಕರೆ ಜಮೀನಿನ(208*208 ಅಡಿ) ಸುತ್ತ ಅಂದರೆ ಬೇಲಿಯಿಂದ ಸುಮಾರು 15 ಅಡಿ ಬಿಟ್ಟು ಮತ್ತು ಒಂದು ಎಕರೆ ಮಧ್ಯ ಭಾಗದಲ್ಲಿ ಸಿಗುವ ಸುತ್ತಾಳತೆ 1000 ಅಡಿ, ಸುತ್ತಾಳತೆಯಲ್ಲಿ ಪ್ರತಿ 20 ಅಡಿಗೆ ಒಂದು ಗಿಡ ಹಾಕಿದಾಗ 50 ಗಿಡಗಳು ಹಿಡಿಯುತ್ತದೆ ಮತ್ತು ಒಂದು ಎಕರೆ ಪ್ರದೇಶದ ಪೊರ ಖಾಲಿ ಜಾಗ ಸಿಗುವುದರಿಂದ ಬೇರೆ ಬೆಳೆ ಮಾಡಲು ನೆರಳು ಅಡಿಯಾಗುವುದಿಲ್ಲ.ಮೇಲ್ಕಂಡ ವಿಧಾನಗಳಲ್ಲಿ ಒಂದು ಎಕರೆ ಪ್ರದೇಶದಲ್ಲಿ ಗರಿಷ್ಠ 50 ತೆಂಗಿನ ಮರ ಮಾತ್ರ ಆಯೋಜನೆ ಮಾಡಬಹುದು ಮತ್ತು ಈ ರೀತಿ ಹಾಕುವುದು ರೂಡಿಗತ್ತವಾಗಿ ಬಿಟ್ಟಿದೆ.

*ಸಾವಯವ ಕೃಷಿಯಲ್ಲಿ ಅಪ್ರತಿಮ ಸಾಧನೆ ಮಾಡಿದ ಮತ್ತು ಕೃಷಿ ಕ್ಷೇತ್ರದಲ್ಲಿ ಹಲವಾರು ಪ್ರಯೋಗ ಮಾಡಿ ಅದರಲ್ಲಿ ಯಶಸ್ಸು ಪಡೆದ ನಂತರ ಅದನ್ನು ರೈತರ ಅನುಕೂಲಕ್ಕೆ ಮಾಹಿತಿಗಳನ್ನು ತಲುಪಿಸಿದ ಕೃಷಿ ದಿಗ್ಗಜರು ಆಗಿದ ಶಿವಮೊಗ್ಗ ಜಿಲ್ಲೆಯ ದಿವಂಗತ

ಶ್ರೀ ಪ್ರಪುಲಚಂದ್ರ ಅವರು ತಮ್ಮ ತೋಟದಲ್ಲಿ ಒಂದು ಎಕರೆ ಪ್ರದೇಶದಲ್ಲಿ 129 ತೆಂಗನ್ನು ಹಾಕಿ ಅದರಲ್ಲಿ ಯಶಸ್ವಿಯಾಗಿ ಉತ್ತಮ ಇಳುವರಿ ಪಡೆದ ಬಗ್ಗೆ ಅವರ ‘ಸಮಗ್ರ ಸಾಧನೆ’ ಪುಸ್ತಕದಲ್ಲಿ ದಾಖಲಿಸಿರುತ್ತಾರೆ.ಇವರು ಕಬ್ಬಿನ ಕೂಳೆ ಬೆಳೆಯನ್ನು 40 ವರ್ಷ ನಿರಂತರವಾಗಿ ಬೆಳೆಯುವ ಮತ್ತು ಕಬ್ಬಿನ ತರಗನ್ನು ಬೆಂಕಿಯಲ್ಲಿ ಸುಡದೆ ಕಬ್ಬಿನ ಸಾಲಿನ ನಡುವೆ ಮುಚ್ಚಿಗೆ ಮಾಡುವ ಕ್ರಮ ಹೇಳಿಕೊಟ್ಟ ಹೆಗ್ಗಳಿಕೆ

ಕೂಡ ಇವರಿಗೆ ಸಲ್ಲುತ್ತದೆ.ಅವರ ತೋಟ ಕೃಷಿ ವಿಶ್ವವಿದ್ಯಾನಿಲಯವಿದ್ದಂತೆ,ಸಾವಿರಾರು ಕೃಷಿಕರಿಗೆ ಮಾರ್ಗದರ್ಶಕರಾಗಿದ್ದರು.

*ನನಗೆ ಶ್ರೀ ಪ್ರಪುಲಚಂದ್ರ ಅವರ ಮಾದರಿಯಲ್ಲಿ ತೆಂಗನ್ನು ನೆಡುವ ಕ್ರಮ ತಿಳಿದಿತ್ತು,ಆದರೆ ಒಂದು ಎಕರೆಯಲ್ಲಿ 129 ತೆಂಗು ನೆಡುವ ಬಗ್ಗೆ ಅವರು ಹಂಚಿಕೊಂಡಿರುವ ಮಾಹಿತಿಯಿರುವ ಪುಸ್ತಕ ನನ್ನ ಬಳಿ ಇರಲಿಲ್ಲ.ಗುಂಡ್ಲುಪೇಟೆಯ ಶ್ರೀ ಚಿನ್ನಸ್ವಾಮಿ ವಡಗೆರೆ ಅವರು ಈ ಮಾದರಿಯಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಅವರ ತೋಟದಲ್ಲಿ ತೆಂಗು ಹಾಕಿರುವ ವಿಚಾರ ಗೊತ್ತಿದ್ದರಿಂದ ಈ ಬಗ್ಗೆ ಅವರನ್ನು ವಿಚಾರಿಸಿದಾಗ ಚಿತ್ರದಲ್ಲಿ ಹಾಕಿರುವ ಪುಸ್ತಕದ ಮಾಹಿತಿಯನ್ನು ಕಳುಹಿಸಿಕೊಟ್ಟರು.ಈ ಮಾಹಿತಿ ಹಿಡಿದುಕೊಂಡು ನಮ್ಮ ಹಿರಿಯರು ಮತ್ತು ಮಾರ್ಗದರ್ಶಕರು ಆದ ನೈಸರ್ಗಿಕ ಕೃಷಿ ಸಂತ ಪಿರಿಯಾಪಟ್ಟಣದ ಕಣಗಾಲ್ ಶ್ರೀ ಕುಳ್ಳೇಗೌಡ ಅವರೊಂದಿಗೆ ಚರ್ಚೆ ಮಾಡಿದಾಗ ಅವರು ಸುಲಭವಾಗಿ ಅರ್ಥವಾಗುವ ರೀತಿ ಚಿತ್ರ ಬರೆದು ಕಳುಹಿಸಿಕೊಟ್ಟಿರುತ್ತಾರೆ.

*ಈ ಮಾದರಿಯಲ್ಲಿ ಒಂದು ಎಕರೆಗೆ 129 ತೆಂಗನ್ನು ನೆಡುವ ವಿಧಾನದ ಬಗ್ಗೆ ಹೆಚ್ಚಿನ ಮಾಹಿತಿ ಬೇರೆಡೆ ಲಭ್ಯವಿಲ್ಲ.ಶ್ರೀ ಪ್ರಪುಲಚಂದ್ರ ಅವರ ಪ್ರಯೋಗಗಳು ಮತ್ತು ಅದರ ಅನುಕೂಲಗಳು ವ್ಯರ್ಥವಾಗದೆ ಎಲ್ಲಾ ರೈತರಿಗೂ ತಲುಪಲಿ ಎಂಬ ಉದ್ದೇಶದಿಂದ ಮತ್ತು ಹೊಸದಾಗಿ ತೆಂಗಿನ ತೋಟ ಮಾಡುವವರು ಈ ವಿಧಾನದಲ್ಲಿ ಎಕರೆಗೆ 129 ತೆಂಗು ಹಾಕಿ ಉತ್ತಮ ಇಳುವರಿ ಮತ್ತು ಆದಾಯ ಪಡೆಯಲಿ ಎಂಬ ಆಶಯದೊಂದಿಗೆ ಮಾಹಿತಿ ಹಂಚಿಕೊಳ್ಳಲಾಗಿದೆ.

-ಪ್ರಶಾಂತ್ ಜಯರಾಮ್

Similar Posts

Leave a Reply

Your email address will not be published. Required fields are marked *

X
× How can I help you?