ನಾವು ಬೆಳೆಸುವ ಬೆಳೆಗೆ ಎಷ್ಟು ಪ್ರಮಾಣದ ಮಣ್ಣು ಬೇಕು? – ಭಾಗ 2

0 minutes, 3 seconds Read

ನಾವು ಬೆಳೆಸುವ ಬೆಳೆಗೆ ಎಷ್ಟು ಪ್ರಮಾಣದ ಮಣ್ಣು ಬೇಕು? (ಭಾಗ -2, ಮುಂದುವರೆದಂತೆ)

==================================

* ಬೆಳೆ ಬೆಳೆಸಲು ಬೇಕಾದ ಫಲವತ್ತಾದ ಮಣ್ಣು(ಪೋಷಕ ಮಣ್ಣು) ಅಂದರೆ ಅದರಲ್ಲಿ ಖನಿಜಾಂಶ ಮತ್ತು ಸಾವಯವ ಪದಾರ್ಥಗಳು ಸಮ(ಖನಿಜಾಂಶ+ಸಾವಯವ ಅಂಶ )ಪ್ರಮಾಣದಲ್ಲಿ ಬೆರತಿರಬೇಕು.ಇಂತಹ ಮಣ್ಣನ್ನು ಪೋಷಕ ಮಣ್ಣು ಎಂದು ಕರೆಯುತ್ತೇವೆ. ಸಮ ಪ್ರಮಾಣ ಅಂದರೆ ತೂಕದ ಲೆಕ್ಕ ಅಲ್ಲ,ಅದು ಘನ ಪ್ರಮಾಣ ಎಂದು ತಿಳಿದುಕೊಳ್ಳಬೇಕು.(measured not by weight, by volume)

*ಖನಿಜ ಭಾಗ ಬಂಡೆಗಳ ಕಣಗಳಿಂದ(ಮೇಲ್ಮಣ್ಣು),ಸಾವಯವ ಪದಾರ್ಥ ಸಸ್ಯ ಭಾಗಗಳಿಂದ ಬರುತ್ತದೆ ಎಂದು ನಮ್ಮಗೆ ತಿಳಿದಿದೆ.

* 01 ಲೀಟರ್ ಒಣ ಮೇಲ್ಮಣ್ಣಿನ ಸರಾಸರಿ ತೂಕ 01 ಕೆಜಿ,ಮಣ್ಣಿನ ಖನಿಜಾಂಶ ಭಾಗವನ್ನು ಸಂಗ್ರಹಿಸುವಾಗ 01 ಚದರಡಿ ಜಾಗದಿಂದ 01 ಸೆಂಟಿಮೀಟರ್ ನಷ್ಟು ಅಳದ ಮೇಲ್ಮಣ್ಣು 01 ಲೀಟರ್ ಘನ ಅಳತೆ ಹೊಂದಿರುತ್ತದೆ.

*01 ಲೀಟರ್ ಕಂಪೋಸ್ಟ್ /ನೆಲಗೊಬ್ಬರ/ಮಿಶ್ರ ಗೊಬ್ಬರ ತೂಕ 400 ಗ್ರಾಂ ಅಥವಾ 1 ಘನ ಅಡಿ ಕಂಪೋಸ್ಟ್ ತೂಕ 10 ಕೆಜಿ.

*ಇದನ್ನು ಸಮ ಪ್ರಮಾಣದಲ್ಲಿ ಬೆರೆಸಿದಾಗ ಒಳ್ಳೆಯ ಫಲವತ್ತಾದ ಮಣ್ಣು ದೊರಕುತ್ತದೆ.

=1 ಲೀಟರ್ ಮೇಲಿನ ಮಣ್ಣು +1 ಲೀಟರ್ ಕಂಪೋಸ್ಟ್

=1 ಕೆಜಿ +400 ಗ್ರಾಂ

=1.4 ಕೆಜಿ/02

ಪೋಷಕ ಮಣ್ಣಿನ 01 ಲೀಟರ್ ತೂಕ ಸುಮಾರು 700 ಗ್ರಾಂ ಆಗಿರುತ್ತದೆ.

*ಒಂದು ಗುಂಟೆ(33*33=1089) ಅಂದರೆ ಸುಮಾರು 1000 ಚದರಡಿ ಜಮೀನಿಗೆ ಸಾವಯವ ಮತ್ತು ಖನಿಜಾಂಶವನ್ನು ಸಮ ಪ್ರಮಾಣದಲ್ಲಿ ಹೊಂದಿರುವ ಪೋಷಕ ಮಣ್ಣು ಸುಮಾರು ಬೆಳೆಯುವ ಬೆಳೆಗೆ ಅನುಗುಣವಾಗಿ 2500 ಲೀಟರ್ (ಕನಿಷ್ಠ ) ರಿಂದ 4000 ಲೀಟರ್ (ಗರಿಷ್ಠ ) ಅಥವಾ 100 ಘನ ಅಡಿ (ಕನಿಷ್ಠ ) ರಿಂದ ಗರಿಷ್ಠ 160 ಘನ ಅಡಿ(Cubic foot).

01 ಘನ ಅಡಿ =27 ಲೀಟರ್(ಲೆಕ್ಕ ಸುಲಭವಾಗಿಸಲು 25 ಲೀಟರ್ ಎಂದುಕೊಳ್ಳಬಹುದು)

*01 ಘನ ಅಡಿ ಪೋಷಕ ಮಣ್ಣು =1/2 ಘನ ಅಡಿ

ಖನಿಜಾಂಶವಿರುವ ಮಣ್ಣು +1/2 ಘನ ಅಡಿ ಕಂಪೋಸ್ಟ್

2500 ಲೀಟರ್ (ಕನಿಷ್ಠ )=1250 ಲೀಟರ್ ಖನಿಜಾಂಶವಿರುವ ಮಣ್ಣು +1250 ಲೀಟರ್ ಕಂಪೋಸ್ಟ್

=1250 ಕೆಜಿ ಮಣ್ಣು +500 ಕೆಜಿ ಕಂಪೋಸ್ಟ್ (1250+500=1750/2500=

700 ಗ್ರಾಂ)

4000 ಲೀಟರ್(ಗರಿಷ್ಠ)=2000 ಲೀಟರ್ ಮಣ್ಣು +2000 ಲೀಟರ್ ಕಂಪೋಸ್ಟ್ (2000+800=2800/4000=

700 ಗ್ರಾಂ)

ಪೋಷಕ ಮಣ್ಣಿನ ತೂಕ 01 ಲೀಟರ್ =700 ಗ್ರಾಂ

*ಒಂದು ಗುಂಟೆ ಅಂದರೆ 1000 ಚದರಡಿ ಜಮೀನಿಗೆ 2500 ಲೀಟರ್ ರಿಂದ 4000 ಲೀಟರ್ ಅಥವಾ 100 ರಿಂದ 160 ಘನ ಅಡಿ ಪೋಷಕ ಮಣ್ಣು ಬೇಕೆಂದು ನಮ್ಮಗೆ ತಿಳಿಯಿತು.

-100 ಘನ ಅಡಿ(ಕನಿಷ್ಠ )

=50 ಘನ ಅಡಿ ಮಣ್ಣು +50 ಘನ ಅಡಿ ಕಂಪೋಸ್ಟ್.(500 ಕೆಜಿ ಕಂಪೋಸ್ಟ್)

-160 ಘನ ಅಡಿ(ಗರಿಷ್ಠ)

=80 ಘನ ಅಡಿ ಮಣ್ಣು +80 ಘನ ಅಡಿ ಕಂಪೋಸ್ಟ್ (800 ಕೆಜಿ ಕಂಪೋಸ್ಟ್ )

*ಒಂದು ಎಕರೆ ಪ್ರದೇಶಕ್ಕೆ(40 ಗುಂಟೆ) ಅಂದರೆ 40,000 ಚದರಡಿ ಜಾಗಕ್ಕೆ ಕನಿಷ್ಠ 1 ಲಕ್ಷ ಲೀಟರ್ ಹಾಗು ಗರಿಷ್ಠ 1.6 ಲಕ್ಷ ಲೀಟರ್ ಅಥವಾ 4000 ರಿಂದ 6400 ಘನ ಅಡಿ ಪೋಷಕ ಮಣ್ಣು ಬೇಕು.

*01 ಎಕರೆ ಪ್ರದೇಶಕ್ಕೆ ವಿವಿಧ ಬೆಳೆಗೆ ಅನುಗುಣವಾಗಿ ಪ್ರಾರಂಭದಲ್ಲಿ ಒಮ್ಮೆ ಕನಿಷ್ಠ 20 ಟನ್ ರಿಂದ ಗರಿಷ್ಠ 32 ಕಂಪೋಸ್ಟ್ ಗೊಬ್ಬರ ಸೇರಿಸುವುದು ಅಥವಾ ಇದಕ್ಕೆ ಸರಿಸಾಮಾನವಾದ ಪ್ರಮಾಣದ ಹಸಿರೆಲೆ ಗೊಬ್ಬರವನ್ನು ಮತ್ತೆ ಮತ್ತೆ ಬಿತ್ತಿ ಭೂಮಿಗೆ ಸೇರಿಸುವ ಮೂಲಕ 06 ತಿಂಗಳೊಳಗೆ ಪೋಷಕ ಮಣ್ಣು ಸಿದ್ದಪಡಿಸಬಹುದು. ಈ ಪೋಷಕ ಮಣ್ಣು ಪ್ರಾರಂಭದಲ್ಲಿ ಒಂದು ಬಾರಿ ತಯಾರಿ ಮಾಡಿ ಪೋಷಕ ಮಣ್ಣಿನ ಕಾಯ ಅಥವಾ ಸ್ವರೂಪವನ್ನು ನಿರಂತರವಾಗಿ ಕಾಯ್ದು ಕೊಳ್ಳಲು ವರ್ಷಕ್ಕೆ ಒಮ್ಮೆ 100 ದಿನಗಳ ಅವಧಿಯ ಮೇವು /ಧಾನ್ಯಗಳ ಬೆಳೆ ಬೆಳದು ಅಥವಾ ಹಸಿರೆಲೆ ಗೊಬ್ಬರ ಬೆಳೆದು ಮಣ್ಣಿಗೆ ಸೇರಿಸುವುದು ಅಥವಾ ಪ್ರತಿ ವರ್ಷ 8 ಟನ್ ಉತ್ತಮ ದರ್ಜೆ ಕಂಪೋಸ್ಟ್ ಸೇರಿಸುವುದರಿಂದ ಮಣ್ಣಿನ ಫಲವತ್ತತೆ ಮಟ್ಟವನ್ನು ನಿರಂತರವಾಗಿ ಕಾಯ್ದುಕೊಳ್ಳಬಹುದು.

(ಮಾಹಿತಿ ಮೂಲ:ಶ್ರೀಪಾದ ದಬೋಲ್ಕರ್ ಅವರ ಸಕಲರಿಗೂ ಸಮೃದ್ಧಿ ಪುಸ್ತಕದಿಂದ)

*ರೈತರಿಗೆ ಸುಲಭವಾಗಿ ಅರ್ಥ ಮಾಡಿಸಲು ಸಂಕ್ಷಿಪ್ತವಾಗಿ ಹೇಳುವ ಪ್ರಯತ್ನ ಮಾಡಲಾಗಿದೆ*

-ಪ್ರಶಾಂತ್ ಜಯರಾಮ್

Similar Posts

Leave a Reply

Your email address will not be published. Required fields are marked *

X
× How can I help you?