ನಾವು ಬೆಳೆಸುವ ಬೆಳೆಗೆ ಎಷ್ಟು ಪ್ರಮಾಣದ ಮಣ್ಣು ಬೇಕು? – ಭಾಗ 01

0 minutes, 4 seconds Read

ನಾವು ಬೆಳೆಸುವ ಬೆಳೆಗೆ ಎಷ್ಟು ಪ್ರಮಾಣದ ಮಣ್ಣು ಬೇಕು?

(ಭಾಗ -01)

==================================

*ನಾವು ಬೆಳೆಸುವ ಬೆಳೆಗೆ ಎಷ್ಟು ಪ್ರಮಾಣದ ಮಣ್ಣು ಬೇಕೆಂದು ಲೆಕ್ಕ ಹಾಕುವ ವಿಧಾನ ನಮ್ಮಗಳಿಗೆ ಗೊತ್ತಿರಬೇಕು, ಮಣ್ಣಿಗೂ ಬೆಳೆಗೂ ಇರುವ ಸಂಬಂಧವನ್ನು ಅರಿತುಕೊಳ್ಳಬೇಕು.

*ಬಿಸಿಲನ್ನು ಸಸ್ಯ/ಗಿಡಗಳ ಹಸಿರೆಲೆಗಳ ಮೂಲಕ ಸುಗ್ಗಿ/ಕುಯಿಲು(Sun Light Harvest) ಮಾಡಿದಾಗ ದೊರೆಯುವ ಜೀವರಾಶಿ(Biomass) ಬಳಸಿ ಫಲವಾತ್ತದ/ಮಡಿ/ಪೋಷಕ ಮಣ್ಣು ನಿರ್ಮಾಣ ಮಾಡಬೇಕು. ದಾಖಲೆ/ಗರಿಷ್ಠ ಇಳುವರಿಯನ್ನು ಪಡೆಯಬೇಕಾದರೆ ಮುಖ್ಯವಾಗಿ ನಾವು ನಮ್ಮ ಜಮೀನಿನ ಮೇಲೆ ಬೀಳುವ ಬಿಸಿಲನ್ನು ಪ್ರತಿ ದಿನ ಗರಿಷ್ಠ ಪ್ರಮಾಣದಲ್ಲಿ ಸುಗ್ಗಿ ಮಾಡಬೇಕು.

*01 ಚದರಡಿ ಜಾಗದಲ್ಲಿ ಪ್ರತಿ ದಿನ(8 ರಿಂದ 10 ಗಂಟೆಗಳ ಕಾಲ) ಬೀಳುವ ಬಿಸಿಲನ್ನು ಹಸಿರು ಎಲೆಗಳ ಮೂಲಕ ಸುಗ್ಗಿ ಮಾಡಿದಾಗ ಗಿಡದಲ್ಲಿ ಸುಮಾರು 3 ರಿಂದ 4 ಗ್ರಾಂ ಗ್ಲೂಕೋಸ್ ಶೇಖರಿಸಲ್ಪಾಡುತ್ತದೆ. ಇದನ್ನು ಒಣ ಸಾಮಗ್ರಿ (Dry matter) ಎಂದು ಕರೆಯುತ್ತೇವೆ.

-01 ವರ್ಷಕ್ಕೆ ಉತ್ಪತ್ತಿಯಾಗುವ ಒಣ ಸಾಮಗ್ರಿ

365 ದಿನಗಳು *4 ಗ್ರಾಂ =1.5 ಕೆಜಿ/ಚದರಡಿ

-1.5 ಕೆಜಿ ಒಣ ಸಾಮಗ್ರಿ ಬಳಸಿ ಸುಮಾರು 1 ರಿಂದ 2 ಲೀಟರ್ ಉತ್ತಮ ದರ್ಜೆಯ ಕಂಪೋಸ್ಟ್ ತಯಾರಿ ಮಾಡಬಹುದು.

-01 ಲೀಟರ್ ಕಂಪೋಸ್ಟ್ ತೂಕ ಸುಮಾರು 400 ರಿಂದ 800 ಗ್ರಾಂ ಆಗಿರುತ್ತದೆ.

* 01 ಚದರಡಿ ಮೇಲೆ ಬೀಳುವ ಬಿಸಿಲನ್ನು ಸುಗ್ಗಿ ಮಾಡಲು 400 ರಿಂದ 800 ಗ್ರಾಂ ಕಳೆತ ಮಿಶ್ರಗೊಬ್ಬರ/ಕಂಪೋಸ್ಟ್/ ಹಸಿರೆಲೆ ಗೊಬ್ಬರ ಭೂಮಿಗೆ ಸೇರಿಸಬೇಕು.

* 1 ಗುಂಟೆ (33*33=1089) ಸುಮಾರು 1000 ಚದರಡಿಯಲ್ಲಿ ಬಿಸಿಲನ್ನು ಸುಗ್ಗಿ ಮಾಡಿದಾಗ ದೊರೆಯುವ ಒಣ ಸಾಮಗ್ರಿ

1000 ಚದರಡಿ *1.5 ಕೆಜಿ =1500 ಕೆಜಿ

=1000-2000 ಲೀಟರ್

=400-800 ಕೆಜಿ

ಸರಾಸರಿ 600 ಕೆಜಿ ಎಂದು ಪರಿಗಣಿಸಬಹುದು.

01 ಎಕರೆ =40 ಗುಂಟೆ *600 ಕೆಜಿ =24 ಟನ್

* 01 ಎಕರೆಗೆ 24 ಟನ್ ಕಂಪೋಸ್ಟ್ ಅಥವಾ ಇದಕ್ಕೆ ಸರಿ ಸಮಾನ ಪ್ರಮಾಣದ ಹಸಿರೆಲೆ ಗೊಬ್ಬರ ಕೊಟ್ಟು ಫಲವತ್ತಾದ ಮಣ್ಣು ಸೃಷ್ಟಿಸಬೇಕು. ಇದನ್ನು ಮಣ್ಣಿಗೆ ಪ್ರಾರಂಭದಲ್ಲಿ ಒಮ್ಮೆ ಕೊಟ್ಟರೆ ಸಾಕು, ಮುಂದೆ ಬೆಳೆಯುವ ಬೆಳೆಗಳ ಅವಶೇಷಗಳನ್ನು (Crop Residues) ಮತ್ತೆ ಭೂಮಿಗೆ ಹಾಕುವುದರಿಂದ ಮುಂದಿನ ದಿನಗಳಲ್ಲಿ ಕಂಪೋಸ್ಟ್ ಕೊಡುವ ಅಗತ್ಯ ಇರುವುದಿಲ್ಲ.

*ಮಣ್ಣಿನ ಒಟ್ಟು ಸಾವಯವ ಪದಾರ್ಥಗಳಲ್ಲಿ(ಲೈಗ್ನೋ ಪ್ರೊಟೀನ್ )ಮೂರನೇ ಒಂದು(1/3) ಭಾಗದಷ್ಟು

ಖನಿಜೀಕರಣಗೊಂಡು(Mineralisation) ನಶಿಸಿ ಹೋಗುತ್ತದೆ, ನಾವು ಇಷ್ಟು ಪ್ರಮಾಣದ ಕಳೆತ ಸಾಮಗ್ರಿಯನ್ನು ಪ್ರತಿ ವರ್ಷ ಮಣ್ಣಿಗೆ ಕೊಡಬೇಕಾಗುತ್ತದೆ. ಆದ್ದರಿಂದ ಇದನ್ನು ತುಂಬಿಕೊಡಲು 100 ದಿನಗಳ ಅವಧಿಯ ಒಂದು ಮೇವು/ಧಾನ್ಯ ಬೆಳೆಗಳನ್ನು ಬೆಳೆದು ಉಳಿಕೆಯನ್ನು ಮಣ್ಣಿಗೆ ಸೇರಿಸುವುದು ಅಥವಾ ಹಸಿರೆಲೆ ಗೊಬ್ಬರ ಬೆಳೆದು ಸೇರಿಸುವುದು ಅಥವಾ 8 ಟನ್ ಕಂಪೋಸ್ಟ್ ಗೊಬ್ಬರ ನೀಡಿ ಮಣ್ಣಿನ ಕಾಯವನ್ನು ಕಾಪಾಡಿ ರಸಭರಿತ ಬೆಳೆ ಬೆಳೆಯಬಹುದು.

(ಮಾಹಿತಿ ಮೂಲ:ಶ್ರೀಪಾದ ದಬೋಲ್ಕರ್ ಅವರ ಸಕಲರಿಗೂ ಸಮೃದ್ಧಿ ಪುಸ್ತಕದಿಂದ)

*ರೈತರಿಗೆ ಸುಲಭವಾಗಿ ಅರ್ಥ ಮಾಡಿಸಲು ಸಂಕ್ಷಿಪ್ತವಾಗಿ ಹೇಳುವ ಪ್ರಯತ್ನ ಮಾಡಲಾಗಿದೆ*

-ಪ್ರಶಾಂತ್ ಜಯರಾಮ್

Similar Posts

Leave a Reply

Your email address will not be published. Required fields are marked *

X
× How can I help you?