10%

ಬದುಕು ಬೇಸಾಯ

ನಿರೂಪಣೆ : ವಿ.ಗಾಯತ್ರಿ
ಪ್ರಕಾಶನ : ಇನ್ಸ್ಟಿಟ್ಯೂಟ್ ಫಾರ್ ಕಲ್ಚರಲ್ ರಿಸರ್ಚ್ ಅಂಡ್ ಆಕ್ಷನ್

203.00 225.00

In stock

Add to wishlist Adding to wishlist Added to wishlist

ಬದುಕು ಬೇಸಾಯ | Baduku besaaya

Compiled by V.Gayatri

Published by Institute for Cultural Research And Action

**

ಭರಮಗೌಡ್ರರಿಗಿದ್ದ ಜ್ಞಾನ ಅಪರೂಪದ ಜ್ಞಾನ, ಸ್ವಂತ ಅನುಭವದಿಂದ ಗಳಿಸಿಕೊಂಡ ಇಂತಹ ಜ್ಞಾನವನ್ನು ಮತ್ತೆ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಮುಖ್ಯಮಂತ್ರಿಯೇ ಇದ್ದ ಸಭೆಯಾದರೂ ಸರಿಯೇ, ಚೂರೂ ರಾಜಿಯಾಗದೆ ತಮ್ಮ ಅನುಭವ-ವಿಚಾರಗಳನ್ನು ಸ್ಪಷ್ಟವಾಗಿ ತಣ್ಣಗೆ ಹೇಳುತ್ತಿದ್ದ ವಿಶಿಷ್ಟ ವ್ಯಕ್ತಿತ್ವ ಅವರದ್ದು, ಅವರ ನೆಲಮೂಲದ ಆ ವಿವೇಕವನ್ನು ಸರ್ಕಾರದ ನೀತಿಗಳಲ್ಲಿ, ವಿಶ್ವವಿದ್ಯಾಲಯಗಳ ಬೋಧನೆಯಲ್ಲಿ ಕಿಂಚಿತ್ತಾದರೂ ಬಳಸಿಕೊಂಡಿದ್ದರೆ ಸಮಾಜಕ್ಕೆ ಬಹು ದೊಡ್ಡ ಕೊಡುಗೆಯಾಗುತ್ತಿತ್ತು, ಹಾಗಾಗಲು ಬಿಡಲಿಲ್ಲ. ಇದರಿಂದ ಕಳೆದುಕೊಂಡವರು ಭರಮಗೌಡ್ರರಂತೂ ಖಂಡಿತಾ ಇಲ್ಲ.

ಅ. ನಾ. ಯಲ್ಲಪ್ಪ ರೆಡ್ಡಿ, ಖ್ಯಾತ ಪರಿಸರವಾದಿಗಳು

ಕಳೆದ 30 ವರ್ಷದ ಅನುಭವದಲ್ಲಿ ಮಳೆಯಾಶ್ರಿತ ಬೇಸಾಯದಲ್ಲಿ ಭರಮಗೌಡ್ರರಂಥ ಆದ್ಭುತವಾದ ಕೃಷಿ ಜ್ಞಾನ ಹೊಂದಿದ್ದ ಇನ್ನೊಬ್ಬರನ್ನು ನಾನು ಎಲ್ಲೂ ನೋಡಿಲ್ಲ. ಇವರು ಸಬ್ಸಿಡಿ ಆಸೆಗಾಗಿ ಕೃಷಿ ಮಾಡಿದವರಲ್ಲ. ನೆಲದ ಪ್ರೀತಿಗಾಗಿ, ಸಮಾಜದ ಪ್ರೀತಿಗಾಗಿ ಕೃಷಿ ಮಾಡಿದವರು. ಇವರದ್ದು ಪಂಚತಾರ ಸಾವಯವ ಕೃಷಿಯಾಗಿರಲಿಲ್ಲ, ಸಣ್ಣ ರೈತರತ್ತ ಮುಖ ಮಾಡಿದ ಕೃಷಿಯಾಗಿತ್ತು. ಲಾಭ ಗಳಿಕೆಯ ಧಾವಂತದ ಕೃಷಿಯಾಗಿರಲಿಲ್ಲ, ಸಮಾಜದ ರಕ್ಷಣೆ ಮಾಡುವ ಕೃಷಿಯಾಗಿತ್ತು. ಚಿಂತನೆ ಮತ್ತು ಕಾಯಕದಲ್ಲಿ ಅನನ್ಯ ವ್ಯಕ್ತಿತ್ವ ಹೊಂದಿದ್ದವರು ಭರಮಗೌಡ್ರರು

ಪಾಂಡುರಂಗ ಹೆಗ್ಡೆ, ಪರಿಸರ ಹೋರಾಟಗಾರರು

ರೈತರನ್ನು ಕಂಡುಬಿಟ್ಟರೆ ಭರಮಗೌಡ್ರರಿಗೆ ಅದೆಂಥಾ ಅಭಿಮಾನವೋ! ಅದೆಷ್ಟು ಪ್ರೀತಿಯೋ! ರೈತರು ಎಲ್ಲಿ, ಏನೇ ಕೇಳಿದರೂ ಅವರಿಗೆ ಪೂರ್ತಿ ಅರ್ಥವಾಗುವವರೆಗೆ ಬಿಡಿಸಿ ಬಿಡಿಸಿ ಹೇಳುತ್ತಿದ್ದವರು ನಮ್ಮ ಭರಮಗೌಡ್ರ ಒಬ್ಬರೇ. ಅಂಥ ಇನ್ನೊಬ್ಬರನ್ನು ನಾನು ನೋಡಿಲ್ಲ. ಯಾವುದೇ ಕಾರ್ಯಕ್ರಮವಿರಲಿ, ಸಭೆಗಳಿರಲಿ, ಚರ್ಚೆ ದಿಕ್ಕುತಪ್ಪುತ್ತಿದೆ ಎಂದಾಗ ನೂರಾರು ಪುರಾವೆಗಳನ್ನು, ಅನುಭವಗಳನ್ನು ನಿದರ್ಶನವಾಗಿ ಕೊಟ್ಟು ಅದನ್ನು ಸರಿ ದಾರಿಗೆ ಎಳೆದುಬಿಡುತ್ತಿದ್ದರು. ಪ್ರತಿ ಕ್ಷಣ ರೈತರ ಆಗುಹೋಗುಗಳ ಬಗ್ಗೆ ಚಿಂತನೆ ಮಾಡುತ್ತಿದ್ದ, ಅವರಿಗಾಗಿ ದೇಶ-ವಿದೇಶದ ಮಾಹಿತಿಯನ್ನೆಲ್ಲಾ ಹೊತ್ತುತರುತ್ತಿದ್ದ ಕಣ್ಮಣಿ ಅವರು

ಬಸವರಾಜು ಬಿ. ಸಂತೇಶಿವರ, ಹೆಸರಾಂತ ಸಾವಯವ ಕೃಷಿಕರು

Reviews

There are no reviews yet.

Be the first to review “ಬದುಕು ಬೇಸಾಯ”

Your email address will not be published. Required fields are marked *

You may also like…