ಹರಿವ ನದಿ
₹180.00₹200.00 (-10%)
7 in stock
ನಿರೂಪಣೆ : ಭಾರತಿ ಹೆಗಡೆ
ಪ್ರಕಾಶನ : ವಿಕಾಸ ಪ್ರಕಾಶನ
ಹರಿವ ನದಿ | Hariva Nadi
Narrated by Bharathi Hedge
Published by Vikasa Prakashana
***
ಸಾಲು ಬೆಟ್ಟ, ಹಸಿರು ಕಾಡು, ಹರಿವ ಹೊಳೆ ಇವುಗಳ ಮೇಲೆ ಬೀಸುವ ತಂಗಾಳಿ ಅದರ ಸುತ್ತಮುತ್ತ ಹುಟ್ಟಿ ಬಾಳುವ ಜನರ ಬದುಕಿನಲ್ಲೂ ಇರುತ್ತದೆ ಎಂದು ಭಾವಿಸುವುದು ಬಹಳ ಕಷ್ಟ! ಹಕ್ಕಿಯ ಕೂಗು, ಆಲೆಗಳ ಕಲರವ, ಹೂಗಂಧಗಳ ಜೊತೆ ಅದರಲ್ಲಿ ಬಿರುಗಾಳಿಯ ಮೊರೆತವೂ ಇರುತ್ತದೆ. ಹೆಣ್ಣುಜೀವಗಳ ಪಾಲಿಗೆ ಇವುಗಳ ಜೊತೆ ಸಂಸಾರದ ಸಂಕಟಗಳೂ ಸೇರುತ್ತವೆ. ಮೀನಾಕ್ಷಿ ಭಟ್ಟರ ಬದುಕಿನ ಕಥನ ಈ ಸಾಮಾಜಿಕ ಸತ್ಯವನ್ನು ಸರಳವಾಗಿ ಮನನ ಮಾಡಿಸುತ್ತದೆ. ಆದರೆ ಜೀವಪರ – ಜೀವನಪರ ನಿಲುವು ಎಂಬ ಮೀಟುಗೋಲು ಇದ್ದರೆ ಎಂಥ ಪ್ರಚಂಡ ಪ್ರವಾಹವನ್ನೂ ದಾಟಿಕೊಂಡು ದಡ ಸೇರಬಹುದು ಎಂಬ ವೈಯಕ್ತಿಕ ಸತ್ಯವನ್ನೂ ಈ ಕಥನ ಹೇಳುತ್ತದೆ. ಕತ್ತಲು ಇರಬಹುದು. ಆದರ ನೆರೆಹೊರೆಯಲ್ಲೇ ಬೆಳಕೂ ಇರುತ್ತದೆ ಎನ್ನುವುದಕ್ಕಿಂತ ಹೆಚ್ಚಿನ ನಂಬಿಕೆ ಬೇರೇನು ಬೇಕಿದೆ? ಸಾಮಾನ್ಯ ಗೃಹಿಣಿ ಎನಿಸಿದ ಮೀನಾಕ್ಷಿ ಭಟ್ಟರ ಇಂಥ ಅಸಾಮಾನ್ಯ ನಂಬಿಕೆಯು ಹಲವು ಸಂತ್ರಸ್ತೆಯರ ಬಾಳಿನ ಕಣ್ಣೀರನ್ನು ಒರೆಸುವಷ್ಟು ಶಕ್ತವಾಗಿದೆ. ಈ ನಂಬಿಕೆ ನಮ್ಮ ಸಮಾಜದಲ್ಲಿ ಸದಾ ಹರಿವ ನದಿಯಾಗಿರಲಿ.
– ಆರ್. ಪೂರ್ಣಿಮಾ