Description
ಹಸಿರು ಟಾವೆಲ್ | Hasiru Towel
Written by TS Goravar
Published by Sangaatha Pustaka
ಕಸುವುಳ್ಳ ಕಪ್ಪುಮಣ್ಣಿನ ಹೊಲದಲ್ಲಿ ದುಡಿದುಡಿದು ಅಲ್ಲಿನ ಮಣ್ಣಿನಲ್ಲಿಯೇ ಸಾವಯವವಾಗಿ ಬೆರೆತು ಹೋಗಬಹುದಾಗಿದ್ದ ರೈತನೊಬ್ಬನ ಬದುಕಿನ ಹಾಡು ಈ ‘ಹಸಿರು ಟಾವೆಲ್’. ಸೂಡಿ ಗ್ರಾಮದ ಕೂಡ್ಲೆಪ್ಪ ಗುಡಿಮನಿ ಎಂಬ ಕೃಷಿಋಷಿಯ ಜೀವನಗಾಥೆ ಮೂಲಕ ಬಯಲುಸೀಮೆಯ ಜನಬದುಕಿನ ಕಥನವನ್ನೂ ಕಟ್ಟಿಕೊಟ್ಟಿದ್ದಾರೆ ಕಥೆಗಾರ ಟಿ.ಎಸ್.ಗೊರವರ. ಕಾಡ ಕುಸುಮದಂತೆ ಅರಳಿ, ಸುಗಂಧ ಬೀರಿ ಅಲ್ಲಿಯೇ ಕಳೆದುಹೋಗಬಹುದಾಗಿದ್ದ ಕಥೆಯನ್ನು ಹೆಕ್ಕಿತಂದು, ಓದುಗರು ಅದರ ಪರಿಮಳವನ್ನು ಆಸ್ವಾದಿಸುವಂತೆ ಮಾಡಿರುವುದು ಈ ಕೃತಿಯ ಹೆಗ್ಗಳಿಕೆ.
– ಪ್ರಜಾವಾಣಿ
Reviews
There are no reviews yet.