Description
ಕೆನ್ನಾಲಿಯ ಜಾಡಿನಲ್ಲಿ | Kennayiya Jaadinalli
Author: Krupakar Senani
Publication : Pustaka Prakashana
ಒಂದೆರಡಲ್ಲ, ಬರೋಬ್ಬರಿ ಹದಿನೈದು ವರ್ಷಗಳ ಕಾಲ ಅವರಿಬ್ಬರು ಕಾಡು ನಾಯಿಗಳ ಜಾಡಿನಲ್ಲಿ ಹೆಜ್ಜೆಹಾಕಿದರು. ಕಾಡಿನೊಳಗೊಂದಾಗಿ ಅದರೊಳಗಿನ ಹತ್ತಾರು, ನೂರಾರು ವಿದ್ಯಮಾನಗಳನ್ನು ಆಳವಾಗಿ ಅರ್ಥಮಾಡಿಕೊಳ್ಳುತ್ತ, ಅತ್ಯಂತ ಸೂಕ್ಷ್ಮ ಸ್ವಭಾವದ ಕೆನ್ನಾಯಿಗಳ ಅಂತರಂಗವನ್ನು ಅಭ್ಯಸಿಸುತ್ತ, ತಾವು ಕಂಡುಕೊಂಡ ಸಂಗತಿಗಳನ್ನು ಒಂದು ತಾರ್ಕಿಕ ಎಳೆಯಲ್ಲಿ ಪೋಣಿಸುತ್ತ ಸಾಗಿದರು. ‘ಜೀವ ವಿಜ್ಞಾನದ ಸಂಶೋಧನಾ ಹಾದಿಯೇ ಹಾಗೆ, ಸಮಯ ಕಳೆಯುತ್ತಿದ್ದಂತೆ ಉತ್ತರಗಳಿಗಿಂತ ಪ್ರಶ್ನೆಗಳೇ ಹೆಚ್ಚಾಗತೊಡಗುತ್ತವೆ. ಇದೊಂದು ಎಂದಿಗೂ ಮುಗಿಯದ ಪಯಣ’ ಎನ್ನುತ್ತಾರೆ ಖ್ಯಾತ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ ಮತ್ತು ಸೇನಾನಿ.
– ಶಿವರಾಂ ಪೈಲೂರು
Reviews
There are no reviews yet.