Description
ಕುಂದಾಪ್ರ ಕನ್ನಡ ನಿಘಂಟು | Kundapura Kannada Nighaṇṭu
ಕುಂದಾಪ್ರ ಕನ್ನಡ – ಉಡುಪಿಯ ಕಲ್ಯಾಣಪುರ ಹೊಳೆಯಿಂದೀಚೆ ಶಿರೂರು ತನಕ ಕೇಳಿ ಬರುವ ಒಂದು ವಿಶಿಷ್ಟ ಉಪಭಾಷೆ. ಇದು ಕುಂದಾಪುರ ಪರಿಸರದ ವ್ಯಾಪ್ತಿಗಷ್ಟೇ ಸೀಮಿತವಾದುದಾದರೂ ಇದರ ಆಳ, ವಿಸ್ತಾರ ಅಗಾಧ. ಊರಿಂದ ಊರಿಗೆ, ಸಮುದಾಯದಿಂದ ಸಮುದಾಯಕ್ಕೆ ಶಬ್ದಗಳ ಬಳಕೆಯಲ್ಲಿನ ವೈವಿಧ್ಯ ಆಶ್ಚರ್ಯ ಹುಟ್ಟಿಸುತ್ತದೆ. ಕುಂದಾಪುರದ ಹೊರಗೆ, ಹೆಚ್ಚಾಗಿ ಬೆಂಗಳೂರು, ಮೈಸೂರು ಮೊದಲಾದೆಡೆ, ಇದು ‘ಕೋಟಾ ಕನ್ನಡ’ ಎಂದು ಪರಿಚಿತ. ಕೆಲವರು ಇದನ್ನು ಕುಂದಗನ್ನಡ ಎಂದು ಕರೆಯುವುದೂ ಇದೆ. ಆದರೆ, ಸ್ಥಳೀಯ ಬಹುಸಂಖ್ಯಾತ ಶ್ರೀಸಾಮಾನ್ಯರ ಬಾಯಲ್ಲಿ ಇದು ‘ಕುಂದಾಪ್ರ ಕನ್ನಡ’ ಎಂದೇ ಕರೆಯಲ್ಪಡುತ್ತದೆ.
Reviews
There are no reviews yet.