Sale!

ಮಣ್ಣಿನ ಗೆಳತಿ

162.00

ಲೇಖಕರು : ಭಾರತಿ ಹೆಗಡೆ

ಪ್ರಕಾಶನ : ವಿಕಾಸ ಪ್ರಕಾಶನ

6 in stock

Compare

Description

ಮಣ್ಣಿನ ಗೆಳತಿ | Mannina Gelathi

Author : Bharathi Hegde

Publication : Vikasa Prakashana

ಕೃಷಿ ಎಂದರೆ ಸೃಷ್ಟಿಕ್ರಿಯೆ, ಜೀವ ಪೋಷಣೆಯ ಕ್ರಿಯೆ.ಬೀಜ ಬಿತ್ತನೆಯ ನಂತರದ ಪ್ರತಿಹಂತದಲ್ಲೂ ತಾಯ್ಮನದ ಆರೈಕೆ ಸಿಕ್ಕರೆ ಮಾತ್ರ ಫಸಲು ಸಿಗುತ್ತದೆ.ಭಾರತದಲ್ಲಿ ಶೇ.90ರಷ್ಟು ಮಹಿಳೆಯರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.ಮಣ್ಣು ಇಲ್ಲಿ ಹೆಣ್ಣಿಗೆ ಸಹಗಾಮಿನಿಯಾಗಿದೆ.ಮಣ್ಣಿನ ಪ್ರೀತಿಯಿಂದಾಗಿ ತವರಿನಲ್ಲೇ ಬೇರು ಬಿಡುವ ಲಕ್ಕವ್ವ,ಟನ್ ಗಟ್ಟಲೆ ಇಳುವರಿ ಪಡೆಯುವ ಕ್ಯಾಪ್ಸಿಕಮ್ ಕಮಲಮ್ಮ , ಹೀಗೆ ಹಲವಾರು ಚಿತ್ರಣಗಳು ಈ ಕೃತಿಯಲ್ಲಿವೆ. ಸೀಮಿತವಾದ ಭೂಮಿ, ಕೈ ತೋಟ ಹಾಗೂ ಮನೆಯ ತಾರಸಿಯಲ್ಲಿ ಸಣ್ಣ ಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಿರುವ ಮತ್ತು ರೋಗನಿರೋಧಕ ನಾಟಿ ಬೀಜಗಳನ್ನು ಕಾಪಾಡುತ್ತಾ, ಸ್ವಾವಲಂಬನೆಯ ಬದುಕು ಕಟ್ಟಿಕೊಂಡಿರುವ ಅನೇಕ ಮಹಿಳೆಯರ ಬದುಕನ್ನು ಇಲ್ಲಿ ಸಂಗ್ರಹಿಸಿದ್ದಾರೆ.

ಯಾವ ಕಾಲದ ಸಮಾಜದಲ್ಲೂ ಸಿದ್ಧ ಮಾದರಿಗಳು ಇರುವ ಹಾಗೆ ಅವುಗಳನ್ನು ಮುರಿದವರು, ಮುರಿದು ಮತ್ತೆ ಕಟ್ಟಿದವರು ಇದ್ದೇ ಇರುತ್ತಾರೆ. ‘History’ ಯಲ್ಲಿ ಅಂಥ ‘Her Story’ ಗಳು ಇದ್ದೇ ಇರುತ್ತದೆ. ಪತ್ರಕರ್ತೆ ಭಾರತಿ ಹೆಗಡೆ ಹಾಗೆ ಮುರಿದು ಕಟ್ಟಿದ ಹೆಣ್ಣು ಮಾದರಿ ‘Her Story’ ಗಳನ್ನು ಹುಡುಕಿ ಹೆಕ್ಕಿ ಎಲ್ಲರ ಮುಂದಿಡುವ ಪ್ರಯತ್ನವನ್ನು ಇಲ್ಲಿ ಬಹಳ ಚೆನ್ನಾಗಿ ಮಾಡಿದ್ದಾರೆ.
– ಡಾ. ಆರ್. ಪೂರ್ಣಿಮಾ, ಲೇಖಕರು

Reviews

There are no reviews yet.

Be the first to review “ಮಣ್ಣಿನ ಗೆಳತಿ”

Your email address will not be published. Required fields are marked *

X

Add to cart

× How can I help you?