Description
ನಂದನವನ | NandanaVana
Written by Narendra Rai Derla
Published by Kanasu Prakashana
ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಒಮ್ಮೆ ಸುತ್ತಿ ಬನ್ನಿ .ಈ ದೇಶದ ಮೂಲೆಮೂಲೆಯಲ್ಲಿ ರಾಜಕಾರಣಿಗಳ, ಸ್ವಾತಂತ್ರ್ಯ ಹೋರಾಟಗಾರರ, ಸಾಹಿತಿಗಳ, ಕಲಾವಿದರ, ಸಿನಿಮಾ ನಟರ ಪ್ರತಿಮೆಗಳನ್ನು ನಿಲ್ಲಿಸಿದ್ದಾರೆ. ಆದರೆ ಇವರೆಲ್ಲಾ ಸೇರಿ ಈ ದೇಶದ ಎಲ್ಲರಿಗೂ ಅನ್ನ ಕೊಡುವ ಒಬ್ಬನೇ ಒಬ್ಬ ರೈತನ ಮೂರ್ತಿಯನ್ನು ನೀವು ಎಲ್ಲಾದರೂ ನೋಡಿದ್ದೀರಾ? ಎಲ್ಲರ ಹಾಗೆ ಈ ದೇಶದ ರೈತರಿಗೆ ಜೀವ -ಜೀವನ ಇಲ್ಲವೇ?. ಮತ್ತೇಕೆ ರೈತರ ಆತ್ಮ ಚರಿತ್ರೆ- ಜೀವನ ಚರಿತ್ರೆ ಹೆಚ್ಚು ಹೆಚ್ಚು ಪ್ರಕಟವಾಗುವುದಿಲ್ಲ? ಇಂಥ ಪ್ರಶ್ನೆ ಅನೇಕ ದಿನದಿಂದ ನನ್ನನ್ನು ಕಾಡುತ್ತಿತ್ತು. ಇದೀಗ ಕರ್ನಾಟಕದ ಒಂದಷ್ಟು ಸಾಧಕ ರೈತರನ್ನು ಅಗೆದು ಬಗೆದು ಬರೆದ ದಾಖಲಿಸುವ ಪ್ರಯತ್ನವನ್ನು ‘ಕನಸು ಪ್ರಕಾಶನ’ ಮಾಡಬೇಕೆಂದಿದೆ. ಈ ಸರಣಿಯಲ್ಲಿ ಮೊದಲ ಪುಸ್ತಕವೇ ನನ್ನೂರ ಅದ್ಭುತ ಕೃಷಿಕ ತಿರುಮಲೇಶ್ವರ ಭಟ್ಟರ ‘ನಂದನವನ’.
Reviews
There are no reviews yet.