Sale!

ಒಗ್ಗರಣೆ ಡಬ್ಬಿಯಲ್ಲಿ ಪಶು ಆರೋಗ್ಯ

108.00

ಲೇಖಕರು: ಡಾ. ಗಣೇಶ ಹೆಗಡೆ ನೀಲೇಸರ

ಪ್ರಕಾಶಕರು: ನದಿ ಪ್ರಕಾಶನ

6 in stock

Category:

Description

ಒಗ್ಗರಣೆ ಡಬ್ಬಿಯಲ್ಲಿ ಪಶು ಆರೋಗ್ಯ | Oggarane Dabbiyalli Pashu Arogya

Author: Dr. Ganesh Hegde Neelesara

Publication : Nadi Prakashana

ಆಧುನಿಕ ಪಶುವಿಜ್ಞಾನವನ್ನು ಓದಿರುವ ಲೇಖಕರು ನಾಟಿ ಪಶುವೈದ್ಯವನ್ನೂ ಅಭ್ಯಾಸ ಮಾಡಿದವರು. ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತ ಪಶುಸಂಗೋಪನೆಯ ಒಳಹೊರಗನ್ನು ಆಳವಾಗಿ ತಿಳಿದುಕೊಂಡವರು. ಜಾನುವಾರುಗಳ ಅನೇಕ ಆರೋಗ್ಯ ತೊಂದರೆಗಳಿಗೆ ರೈತರು ಅವರವರ ಮನೆಯಲ್ಲೇ ಇರುವಂತಹ ಸಾಮಗ್ರಿಗಳನ್ನು (ಮುಖ್ಯವಾಗಿ ಸಂಬಾರ ಪದಾರ್ಥಗಳು) ಅಥವಾ ಸುತ್ತಮುತ್ತ ಲಭ್ಯವಿರುವ ಸಸ್ಯಗಳನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದು ಎಂಬುದು ಅವರ ಅನಿಸಿಕೆ. ಇಂತಹ ಜನಪದ ವೈದ್ಯ ವಿಧಾನಗಳನ್ನು ಸುಲಭವಾಗಿ ಪ್ರಯೋಗಿಸಬಹುದು, ಮಾತ್ರವಲ್ಲ ಇವಕ್ಕೆ ಖರ್ಚೂ ಕಡಿಮೆ. ಪಶುವೈದ್ಯರು ತುರ್ತಾಗಿ ಸಿಗದಿದ್ದಾಗ ತಕ್ಷಣಕ್ಕೆ ಕೆಲವೊಂದು ಚಿಕಿತ್ಸೆಗಳನ್ನು ರೈತರೇ ಮಾಡಿಕೊಳ್ಳಬಹುದು ಎನ್ನುವ ಲೇಖಕರು, ಅಂತಹ ಚಿಕಿತ್ಸಾ ಕ್ರಮಗಳನ್ನು ಸರಳವಾಗಿ, ಸವಿವರವಾಗಿ ವಿಶದಪಡಿಸಿದ್ದಾರೆ.

ವಿವಿಧ ಜ್ವರಗಳಿಗೆ ಬಗೆಬಗೆಯ ನಾಟಿ ಔಷಧಿ, ಚರ್ಮರೋಗಕ್ಕೆ ಸಂಬಾರ ಮದ್ದು, ಕೆಮ್ಮು, ದಮ್ಮು, ಕಫ ನೋವಿಗೆ ಪರಿಹಾರ, ಎಲುಬು ಮತ್ತು ನರಮಂಡಲದ ಸಮಸ್ಯೆಗಳು, ಗಾಯ, ವೃಣಗಳಿಗೆ ಪರಿಹಾರ, ಕಣ್ಣಿನ ತೊಂದರೆಗಳು, ಬಾಣಂತಿ ಪಶುವಿನ ಆರೈಕೆ, ವಿಷಪದಾರ್ಥ ಸೇವನೆಗೆ ಚಿಕಿತ್ಸೆ, ಅಶಕ್ತ ರಾಸುಗಳ ಬಲವರ್ಧನೆ, ಕಾಲು-ಬಾಯಿ ಜ್ವರಕ್ಕೆ ಮದ್ದು ಮೊದಲಾದ ಅಧ್ಯಾಯಗಳು ಪುಸ್ತಕದಲ್ಲಿವೆ. ಕೋಳಿ, ಕುರಿಗಳ ಚಿಕಿತ್ಸೆಯ ಕುರಿತು ಕೂಡ ಪ್ರಸ್ತಾಪವಿದೆ. ಪಶುಸಂಗೋಪನೆಯಲ್ಲಿ ತೊಡಗಿರುವವರಿಗೆ ಉಪಯುಕ್ತ ಕಿವಿಮಾತುಗಳನ್ನೂ ಅಲ್ಲಲ್ಲಿ ಹೇಳಿದ್ದಾರೆ.

ಔಷಧಿಯಾಗಿ ಬಳಸುವ ಗಿಡಮೂಲಿಕೆಗಳ ಸಸ್ಯಶಾಸ್ತ್ರೀಯ ಹೆಸರು ಮತ್ತು ಪ್ರಾದೇಶಿಕ ಹೆಸರುಗಳ ಪಟ್ಟಿಯನ್ನು ನೀಡಿರುವುದರಿಂದ ಹೊಸಬರಿಗೂ ಗಿಡಗಳನ್ನು ಪತ್ತೆಹಚ್ಚಲು ಸಹಕಾರಿ.

ಈ ಪುಸ್ತಕ ರೈತರಿಗೆ ಮಾತ್ರವಲ್ಲ, ಇತರ ಪಶುವೈದ್ಯರಿಗೂ, ಪಶುವೈದ್ಯಕೀಯ ಓದುತ್ತಿರುವವರಿಗೂ ಮಹತ್ವದ ಕೈಪಿಡಿ. ಗಿಡಮೂಲಿಕೆಗಳನ್ನು ಉಳಿಸಿ ಬೆಳೆಸುವ ಮಹತ್ಕಾರ್ಯದಲ್ಲಿ ನಿರತರಾಗಿರುವವರಿಗೂ ಇದರಿಂದ ತುಂಬ ಪ್ರಯೋಜನವಿದೆ.

Reviews

There are no reviews yet.

Be the first to review “ಒಗ್ಗರಣೆ ಡಬ್ಬಿಯಲ್ಲಿ ಪಶು ಆರೋಗ್ಯ”

Your email address will not be published.

X

Add to cart

× How can I help you?