Sale!

ರೈತರ ಆದಾಯವರ್ಧನೆಗೆ ಮೌಲ್ಯವರ್ಧನೆ

160.00 150.00

ಲೇಖಕರು : ಶ್ರೀ ಪಡ್ರೆ
ಪ್ರಕಾಶನ : ಕೃಷಿ ಮಾಧ್ಯಮ ಕೇಂದ್ರ & ಫಾರ್ಮರ್ ಫಸ್ಟ್ ಟ್ರಸ್ಟ್

24 in stock

Description

ರೈತರ ಆದಾಯವರ್ಧನೆಗೆ ಮೌಲ್ಯವರ್ಧನೆ | Raithara Aadaayavardhanege Moulyavardhane

Author : Shree Padre

Publication: Centre for Agricultural Media & Farmer First Trust

ಮಹಾರಾಷ್ಟ್ರದಲ್ಲಿ ಎರಡು ಡಜನ್ನಿಗೂ ಹೆಚ್ಚು ಚಿಕ್ಕು ಉತ್ಪನ್ನಗಳನ್ನು ತಯಾರಿಸಿ ಗ್ರಾಹಕರಿಗೆ ಒದಗಿಸುತ್ತಿರುವ ವಿಶಿಷ್ಟ ಚಿಕ್ಕು ಪಾರ್ಲರ್, ನೆಲ್ಲಿಯ ಉತ್ಪನ್ನಗಳಿಗೆ ದೇಶದಲ್ಲೇ ಹೆಸರು ಮಾಡಿದ ‘ಆಮ್ಲಾಮೃತ್’, ಸೋಲಾರ್ ಡ್ರೈಯರ್ ಗಳ ಮೂಲಕ ಹಣ್ಣು-ತರಕಾರಿಗಳ ಸಂಸ್ಕರಣೆಯಲ್ಲಿ ಪಳಗಿರುವ ನಾಸಿಕ್ ನ ರೈತ ಬಳಗ, ಕೇರಳದಲ್ಲಿ ಜನಪ್ರಿಯವಾಗುತ್ತಿರುವ ಹಲಸಿನ ಹಣ್ಣಿನ ಮಿಲ್ಕ್ ಶೇಕ್ ಹಾಗೂ ಪ್ಯಾಶನ್ ಫ್ರುಟ್ ಸ್ಕ್ವಾಷ್, ಕೊಡಗಿನಲ್ಲಿ ಕೃಷಿಯ ಜತೆಗೆ ಮನೆಮಟ್ಟದಲ್ಲಿ ಹಣ್ಣುಗಳ ಮೌಲ್ಯವರ್ಧನೆ, ಕಾಸರಗೋಡು ಬಳಿ ದಾರೆಪುಳಿಯಿಂದ ಮದ್ದಿನೆಣ್ಣೆ ತಯಾರಿ, ಥಾಯ್ಲೆಂಡಿನಲ್ಲಿ ವ್ಯಾಪಕವಾಗಿರುವ ತೆಂಗಿನ ತಾಜಾ ಹಾಲು ಮಾರಾಟ ಉದ್ದಿಮೆ, ಮಲೇಷ್ಯಾ-ಚೆನ್ನೈ-ದೇವರಕೊಲ್ಲಿಯ ಕೊಕೊನಟ್ ಜೆಲ್ಲಿ ಹಾಗೂ ಚಾಮರಾಜನಗರದಲ್ಲಿ ಕಬ್ಬು ಮೌಲ್ಯವರ್ಧನೆಯ ಪ್ರಯತ್ನ – ಇವೆಲ್ಲವನ್ನು ಸವಿವರವಾಗಿ ಸಾದರಪಡಿಸುವ ಕೃತಿಯಿದು.

ಮೌಲ್ಯವರ್ಧನೆ ಏಕೆ ಅಗತ್ಯ? ಈ ಕ್ಷೇತ್ರದಲ್ಲಿ ಏನೆಲ್ಲ ಸಾಧ್ಯತೆಗಳಿವೆ? ರೈತರ ಮಟ್ಟದಲ್ಲಿ ಮೌಲ್ಯವರ್ಧನೆ ಮಾಡುವುದಕ್ಕೆ ಇರುವ ಅಡೆತಡೆಗಳೇನು? ಈ ರಂಗಕ್ಕೆ ಕಾಲಿಡುವ ಹೊಸಬರಿಗೆ ಇನ್ಕ್ಯುಬೇಶನ್ ಸೆಂಟರ್ಗಳು ಹೇಗೆ ಪ್ರಯೋಜನಕಾರಿ? ಮೌಲ್ಯವರ್ಧನೆ ಮಾಡುವವರು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳೇನು? ಈ ವಲಯದ ಸುಧಾರಣೆಗೆ ಇರುವ ಸವಾಲುಗಳೇನು? ಇವೇ ಮೊದಲಾದ ಪ್ರಶ್ನೆಗಳಿಗೆ ತಜ್ಞರು ಈ ಪುಸ್ತಕದಲ್ಲಿ ಉತ್ತರಿಸಿದ್ದಾರೆ.

ತೋಟಗಾರಿಕೆ ಉತ್ಪನ್ನಗಳ ಮೌಲ್ಯವರ್ಧನೆ ಕುರಿತು ಮಾಹಿತಿ-ಮಾರ್ಗದರ್ಶನ-ತರಬೇತಿ ನೀಡುವ ಸರಕಾರಿ ಸಂಸ್ಥೆಗಳ ಪಟ್ಟಿಯನ್ನೂ ಈ ಪುಸ್ತಕ ಒಳಗೊಂಡಿದೆ.

Reviews

There are no reviews yet.

Be the first to review “ರೈತರ ಆದಾಯವರ್ಧನೆಗೆ ಮೌಲ್ಯವರ್ಧನೆ”

Your email address will not be published. Required fields are marked *

You may also like…