ಸಾಮಾಜಿಕ ಉದ್ಯಮಶೀಲರ ಯಶಸ್ಸಿನ ಸೂತ್ರ 

117.00130.00 (-10%)

250 in stock

ಲೇಖಕರು : ವೆಂಕಟೇಶ್ ರಾಘವೇಂದ್ರ
ಪ್ರಕಾಶನ : ಪರಾಗಸ್ಪರ್ಶ ಪ್ರಕಾಶನ

Compare

ಸಾಮಾಜಿಕ ಉದ್ಯಮಶೀಲರ ಯಶಸ್ಸಿನ ಸೂತ್ರ | Saamaajika Udyamasheelara Yashassina Soothra

Written by : Venkatesh Raghavendra

Published by Paragasparsha Prakashana

**

ಸಾಮಾಜಿಕ ಉದ್ಯಮಶೀಲರಿಗೆ ದಾರಿದೀಪ

ಗೆಳೆಯ ವೆಂಕಟೇಶ್ ರಾಘವೇಂದ್ರ ಅವರು ಈ ಕೃತಿಯಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ಬೇರು ಮಟ್ಟದಲ್ಲಿ ಪರಿಹಾರ ಹುಡುಕಿರುವ, ಹುಡುಕಲು ಯತ್ನಿಸುತ್ತಿರುವ ಮತ್ತು ಆ ಮೂಲಕ ಜಾಗತಿಕ ಮಟ್ಟದಲ್ಲಿ ಪರಿಣಾಮ ಉಂಟುಮಾಡಿರುವ ಸುಮಾರು 30 ಮಂದಿ ಸಾಮಾಜಿಕ ಉದ್ಯಮಶೀಲರ ಅದ್ಭುತ ಜೀವನದ ಬಗ್ಗೆ ಬರೆದಿದ್ದಾರೆ. ಜಗತ್ತಿನ ಪಾಲಿಗೆ ದಂತಕಥೆಯಾಗಿರುವ ಈ ಸಾಮಾಜಿಕ ಉದ್ಯಮಶೀಲರು ಅತ್ಯಂತ ಸೃಜನಶೀಲರಾಗಿ, ಪರಿಣಾಮಕಾರಿಯಾಗಿ ಹಲವು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಹುಡುಕಿದ್ದಾರೆ.

ಈ ಜೀವಂತ ದಂತಕಥೆಗಳು ಮುಂದಿನ ಪೀಳಿಗೆಯ ಸಾಮಾಜಿಕ ಉದ್ಯಮಶೀಲರ ಪಾಲಿಗೆ ದಾರಿದೀಪಗಳಾಗಿವೆ. ಈ ದೀಪಗಳೇ ಭವಿಷ್ಯಕ್ಕೆ ಮುನ್ನುಡಿ ಬರೆದು, ಸಾಮಾಜಿಕ ಉದ್ಯಮಗಳ ಮೂಲಕ ಜಗತ್ತನ್ನೇ ಬದಲಿಸಲು ಹೊರಟಿರುವ ಹಲವರ ಪಾಲಿಗೆ ಸ್ಫೂರ್ತಿಯಾಗಿವೆ. ಈಗಾಗಲೇ ಔದ್ಯಮಿಕ ಜಗತ್ತಿನಲ್ಲಿ ಸಾಕಷ್ಟು ಯಶಸ್ವಿಯಾಗಿರುವ ಹಲವರು, ಸಾಮಾಜಿಕ ಉದ್ಯಮಶೀಲ ಜಗತ್ತಿನ ಬೇಲಿಯ ಬಳಿ ನಿಂತು, ಒಳಗೆ ಧುಮುಕಲೇ ಅಥವಾ ಬೇಡವೇ ಎಂದು ಯೋಚಿಸುತ್ತಾ ನಿಂತಿರುತ್ತಾರೆ. ಅಂತಹವರ ಪಾಲಿಗೆ ಮೇಲಿನ ದಂತಕಥೆಗಳು ಪ್ರೇರಣಾ ಶಕ್ತಿಗಳು.

ಯಾವುದೇ ಮಟ್ಟ ಅಥವಾ ಗಾತ್ರದಲ್ಲಿ, ಯಾರೇ ಸಾಮಾಜಿಕ ಉದ್ಯಮಶೀಲ ಜಗತ್ತಿನಲ್ಲಿ ಕಾರ್ಯಪ್ರವೃತ್ತರಾದರೂ, ಅದರಿಂದ ಸಮಾಜಕ್ಕೆ ಒಂದಿಷ್ಟು ಒಳಿತಾಗುತ್ತದೆ. ಪ್ರಪಂಚದ ಯಾವುದಾದರೂ ಒಂದು ಭಾಗದಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ಒಂದಿಷ್ಟು ಪರಿಹಾರ ಸಿಗುತ್ತದೆ. ಭರವಸೆಯ ಸೆಲೆ ಚಿಮ್ಮುತ್ತದೆ. ಅಂತಹ ಸೆಲೆಯನ್ನು ಅಕ್ಷರಗಳ ಮೂಲಕ ಜಗತ್ತಿಗೆ ತಿಳಿಸಿ ಬದಲಾವಣೆಯ ಗತಿಯನ್ನು ವೃದ್ಧಿಸುತ್ತಿರುವ ವೆಂಕಿ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಸಮಾಜ ಮತ್ತು ಪ್ರಪಂಚದ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬರೂ ಹೀಗೆಯೇ ಒಂದಲ್ಲಾ ಒಂದು ರೀತಿಯಲ್ಲಿ ಜಗತ್ತನ್ನು ಇನ್ನಷ್ಟು ಉತ್ತಮವಾಗಿಸುವ ಯತ್ನಪಡಬೇಕು. ಮುಂದಿನ ಪೀಳಿಗೆಗಾಗಿ ಉತ್ತಮ ಜಗತ್ತನ್ನು ಬಿಟ್ಟುಹೋಗಬೇಕು.

ದೇಶ್ ದೇಶಪಾಂಡೆ
ಸಂಸ್ಥಾಪಕರು ಮತ್ತು ಟ್ರಸ್ಟಿ, ದೇಶಪಾಂಡೆ ಫೌಂಡೇಶನ್
ಆಂಡೋವರ್, ಮಸಾಚುಸೆಟ್ಸ್, ಅಮೆರಿಕ

(ಪುಸ್ತಕಕ್ಕೆ ಬರೆದಿರುವ ಪ್ರಸ್ತಾವನೆಯಲ್ಲಿ)

Be the first to review “ಸಾಮಾಜಿಕ ಉದ್ಯಮಶೀಲರ ಯಶಸ್ಸಿನ ಸೂತ್ರ ”

Your email address will not be published. Required fields are marked *

Reviews

There are no reviews yet.

Main Menu

Open chat