June 2023

ಈ ನೆಲದ ಬದುಕು

ಈ ನೆಲದ ಬದುಕು - ಕನ್ನಡ ನಾಡಿನ ಕೃಷಿ ಆಚರಣೆಗಳು ಲೇಖಕರು : ಮಲ್ಲಿಕಾರ್ಜುನ ಹೊಸಪಾಳ್ಯ ಪ್ರಕಾಶನ : ಧಾನ್ಯ ಪ್ರಕಾಶನ **** ಪ್ರಾದೇಶಿಕ ಸಾಂಪ್ರದಾಯಿಕ ಆಚರಣೆಗಳು ಮತ್ತು ಅವುಗಳ ಮೂಲಕ ವರ್ಗಾಯಿಸಲ್ಪಡುತ್ತಿದ್ದ ಜ್ಞಾನ, ಮೌಲ್ಯ ಮತ್ತು ಸಾಮೂಹಿಕ ಆಚರಣೆಗಳಿಂದ ಸಮೂಹದಲ್ಲಿ ಮೂಡುವ ಸದ್ಭಾವನೆಯನ್ನು ಅರಿತೇ ಹಿರಿಯರು ಹಬ್ಬಗಳ ಆಚರಣೆಗಳ ಪರಿಪಾಠ ಬೆಳೆಸಿದರು. ಕಾಲ ಮತ್ತು ತಂತ್ರಜ್ಞಾನ ಮುಂದುವರಿದಂತೆ ನಿಧಾನವಾಗಿ ಇವೆಲ್ಲ ತೆರೆಮರೆಗೆ ಸರಿಯುತ್ತಾ ಬಂದವು. ಈಗ ಆಚರಣೆಗಳೇ ಗೊತ್ತಿಲ್ಲದಂತಾಗಿವೆ. ಲೇಖಕರಾದ ಮಲ್ಲಿಕಾರ್ಜುನ ಹೊಸಪಾಳ್ಯ ಅವರ "ಈ ನೆಲದ ಬದುಕು – ಕನ್ನಡ ನಾಡಿನ ಕೃಷಿ ಆಚರಣೆಗಳು" ಪುಸ್ತಕದಲ್ಲಿ ಅನೇಕ ಕೃಷಿ ಪದ್ಧತಿ, ಆಚರಣೆ ಮತ್ತು ಅದರ ಹಿಂದಿರುವ ಮುಗ್ಧ ಜನಪದ ಕಥೆಗಳ ಸಂಗ್ರಹವಿದೆ. ಮಳೆ, ಭೂಮಿ ,ಬೆಳೆ,ಸುಗ್ಗಿ ,ಜಾನುವಾರು ಮತ್ತು ತಿಪ್ಪೆಗಳಿಗೆ ವಿಶೇಷ ಸ್ಥಾನ ಕಲ್ಪಿಸಿ ಪ್ರದೇಶಕ್ಕನುಗುಣವಾಗಿ ವಿವಿಧ ಬಗೆಯ ಆಚರಣೆಗಳ ವಿಶೇಷ ಮಾಹಿತಿಗಳಿವೆ **** ಕೆಳಗಿನ ಲಿಂಕ್ ಮೂಲಕ ಖರೀದಿ ಮಾಡಬಹುದು https://booksloka.com/product/ee-nelada-baduku/

Continue Reading →

× How can I help you?