ಪುಟ್ಟೀರಮ್ಮನ ಪುರಾಣ | Putterammana Purana
Interview by V.Gayathri, N. Shivalingegowda
Published by Institute for cultural research and Action
ಪುಟೀರಮ್ಮನವರ ಅನುಭವದ ಮಾತುಗಳು ನಮ್ಮ “ಹಳೆ ಕೃಷಿ ಪದ್ಧತಿ ಎಷ್ಟು ಸಂಪದ್ಭರಿತವಾಗಿದೆ. ರೈತರನ್ನು ಹೇಗೆ ಸ್ವಾವಲಂಬಿಗಳಾಗಿಸುವ ವಿಧಾನವಾಗಿದೆಯೆಂದು ಪ್ರತ್ಯಕ್ಷಿಸಿ ತೋರಿಸುತ್ತದೆ. ಈ ನೆಲದ ಅಮೂಲ್ಯ ಕೃಷಿ ಜ್ಞಾನವನ್ನು ಶತಮಾನಗಳಿಂದ ಸಂರಕ್ಷಿಸಿ ಜಾನಪದ ಹಾಡುಗಳಲ್ಲಿ, ಗಾದೆ ಮಾತುಗಳಲ್ಲಿ, ಸಾಂಸ್ಕೃತಿಕ ಪದ್ಧತಿಗಳಲ್ಲಿ ಅಳವಡಿಸಿ, ಯಾವ ಅಕ್ಷರ ಜ್ಞಾನದ ಹಂಗೂ ಇಲ್ಲದೆ ಮಹಾನ್ ಜ್ಞಾನ ಪರಂಪರೆಯನ್ನು ಮುಂದಿನ ಜನಾಂಗಗಳಿಗೆ ದಾಟಿಸುತ್ತಾ ಬಂದಿರುವುದು ಅದ್ಭುತ.
| ರಮೇಶ್ ಎನ್., ಗಂಗಾವತಿ
ಮಿಶ್ರ ಬೇಸಾಯದ ಉಳಿವು ಮಹಿಳೆಯರಿಂದಲೇ ಎಂದರೆ ತಪ್ಪಿಲ್ಲ. ಸಾಮಾನ್ಯವಾಗಿ ಪುರುಷರ ಗಮನವೆಲ್ಲಾ ಏಕಬೆಳೆ ಮೇಲೆಯೇ. ಹೀಗಾಗಿ ಈಗ ಪುಟ್ಟೇರಮ್ಮನವರಂಥವರು ಅಪರೂಪವಾಗುತ್ತಿದ್ದಾರೆ. ಇವರ ಅನುಭವ, ಜ್ಞಾನದ ದಾಖಲಾತಿ ಅತ್ಯಗತ್ಯ. ಇದು ಅಮೂಲ್ಯ.
| ಎಂ.ಜೆ. ಲಲಿತಾರಾವ್, ಪಾವಗಡ
ಪುಟ್ಟಿರಮ್ಮನ ಬೆರೆಕೆ ಸೊಪ್ಪಿನ ಪುರಾಣ ನಮ್ಮನ್ನು ನೇರವಾಗಿ ನಮ್ಮ ಬೇರಿಗೇ ಕರೆದುಕೊಂಡು ಹೋಗುತ್ತದೆ. ಬೆರಕೆ ಸೊಪ್ಪಿಗೆ ವಾಣಿಜ್ಯ ಮೌಲ್ಯ ಇಲ್ಲದಿದ್ದರೂ ಸಾಂಸ್ಕೃತಿಕ ಮೌಲ್ಯ ಅಪಾರವಾಗಿದೆ. ಇದರ ದಾಖಲಾತಿ ನಮಗೆ ಬೆರೆಕೆಸೊಪ್ಪಿನ ಪ್ರಯೋಜನ ಪಡೆದುಕೊಳ್ಳುವ ಅವಕಾಶ ಒದಗಿಸಿದೆ.
| ನವೀನ್ ಬಿ., ಬೆಂಗಳೂರು
Reviews
There are no reviews yet.