ಅಡಿಕೆ ಪತ್ರಿಕೆ – ಕೃಷಿಕರೇ ರೂಪಿಸುವ ಕೃಷಿಕಪರ ಮಾಧ್ಯಮ

ಕೃಷಿಕರೇ ನಡೆಸುವ ಕರ್ನಾಟಕದ ನಂ.೧ ಕೃಷಿ ಮಾಸಿಕೆ ‘ಅಡಿಕೆ ಪತ್ರಿಕೆ’. ಇದೀಗ ೩೭ನೇ ವರುಷಕ್ಕೆ ಹೆಜ್ಜೆಯೂರಿದೆ. ಕೃಷಿಕರದೇ ಸಂಸ್ಥೆ ‘ಫಾರ್ಮರ್ ಫಸ್ಟ್ ಟ್ರಸ್ಟ್’ ಪ್ರಕಾಶನ ಮಾಡುತ್ತಿದೆ.

ವಿಷಮುಕ್ತ ಕೃಷಿ, ನೆಲಜಲ ಸಂರಕ್ಷಣೆ, ಹೊಸ ಬೆಳೆಗಳು, ರೈತರೇ ಮಾಡಿರುವ ಅನುಶೋಧನೆಗಳು, ಶ್ರಮ ಉಳಿಸುವ ತಂತ್ರಜ್ಞಾನಗಳು, ಮೌಲ್ಯವರ್ಧನೆ-ಮಾರುಕಟ್ಟೆ, ಯಶೋಗಾಥೆಗಳು, ಸೋಲಿನ ಕಥೆಗಳು, ಔಷಧೀಯ ಸಸ್ಯಗಳು, ಮನೆಮದ್ದು, ರಸರುಚಿ… ಹೀಗೆ ವೈವಿಧ್ಯಮಯ ವಿಷಯಗಳ ಬಗ್ಗೆ ಪತ್ರಿಕೆಯು ಲೇಖನ ಪ್ರಕಟಿಸುತ್ತಿದೆ. ಎಲ್ಲವೂ ಅಪೂರ್ವ.

ಕೃಷಿಕರ ಅನುಭವಕ್ಕೆ ಒತ್ತು. ಬೇರೆಲ್ಲೂ ಪ್ರಕಟವಾಗಿರದ ವಿಷಯಗಳನ್ನು ‘ಎಕ್ಸ್ಕ್ಲೂಸಿವ್’ ಅಧ್ಯಯನ ಲೇಖನಗಳನ್ನೇ ಅಡಿಕೆ ಪತ್ರಿಕೆಯು ಓದುಗರ ಮುಂದಿಡುತ್ತಿದೆ. ಕೃಷಿ ಬದುಕಿನ ಯಶೋಗಾಥೆಗಳಿಗೆ, ಕೃಷಿಕರ ಅಗತ್ಯಾಧಾರಿತ ಮಾಹಿತಿಗಳಿಗೆ ಬೆಳಕು ಹಾಕುತ್ತಿದೆ.

ನೆಲ-ಜಲಕ್ಕೆ ಮೊದಲಿಗೆ ಮಾತು ಕೊಟ್ಟಿರುವುದು, ನಿರ್ವಿಷ ಕೃಷಿಗೆ ಪ್ರೋತ್ಸಾಹ, ಕೃಷಿಕರ ಕೈಗೆ ಲೇಖನಿ, ಹಲಸಿಗೆ ಮಾನ ತರಲು ಶ್ರಮಿಸಿರುವುದು, ಬಗೆಬಗೆಯ ತರಕಾರಿ-ಹಣ್ಣುಗಳನ್ನು ಪರಿಚಯಿಸಿರುವುದು ಯಂತ್ರಾವಿಷ್ಕಾರಗಳನ್ನು ಬೆಳಕಿಗೆ ಒಡ್ಡಿರುವಂತಹ ಆಂದೋಳನಗಳು, ಅಡಿಕೆ ಕೃಷಿಯಲ್ಲಿ ಮರವೇರದೆ ಅಡಿಕೆ ಕೊಯ್ಲು ಮಾಡುವ ‘ದೋಟಿ’, ಅಲ್ಲದೆ ‘ಬಾಕಾಹು’ (ಬಾಳೆ ಕಾಯಿ ಹುಡಿ), ‘ಅಡಿಕೆಯಿಂದ ಬಟ್ಟೆಯ ಬಣ್ಣ’ ಮಾಹಿತಿ ಅಭಿಯಾನಗಳು ಕೃಷಿಕ ಸ್ವೀಕೃತಿ ಪಡೆದಿದೆ. ಅಡಿಕೆ ಪತ್ರಿಕೆಯು ಕೃಷಿ ರಂಗದ ಅನ್ಯಾನ್ಯ ಸಮಸ್ಯೆಗಳಿಗೆ ದನಿಯಾಗುತ್ತಾ ಬಂದಿರುವುದು ಪತ್ರಿಕೆಯ ಹೆಗ್ಗಳಿಕೆ.

ಸಂಪಾದಕರು : ಶ್ರೀ ಪಡ್ರೆ
ಪ್ರಕಾಶಕ : ಪಡಾರು ರಾಮಕೃಷ್ಣ ಶಾಸ್ತ್ರೀ
ಪ್ರಕಾಶನ : ಫಾರ್ಮರ್ ಫಸ್ಟ್ ಟ್ರಸ್ಟ್. ಪುತ್ತೂರು

 

 

Leave a Reply

Your email address will not be published. Required fields are marked *

Close
Sign in
Close
Cart (0)

No products in the cart. No products in the cart.





0