- ನಮ್ಮ ದೇಶದ ಪಾರಂಪರಿಕ ಕೃಷಿ ಜ್ಞಾನ,ಹಿರಿಮೆ, ದೃಷ್ಠಿಕೋನ,ಆಯಾಮ ಬಹು ವಿಸ್ತಾರವಾದದ್ದು… ಇಂತಹ ಇತಿಹಾಸ ಹೊಂದಿರುವ ದೇಶಕ್ಕೆ ಸೋ ಕಾಲ್ಡ್ ಎಂಎನ್’ಸಿ ಗಳಾದ ಬೇಯರ್,ಅಮೆಜಾನ್ ಅವರುಗಳ ಪಿತೂರಿ ಮತ್ತು ಹುನ್ನಾರದಿಂದ ಈ ನಮ್ಮ ಸ್ವದೇಶಿ ಕೃಷಿ ವ್ಯವಸ್ಥೆ ನಶಿಸುವ ಹಂತಕ್ಕೆ ಬಂದಿದೆ ಅಂದರೆ ತಪ್ಪಾಗಲಾರದು…!
- ನಮ್ಮ ಸ್ವದೇಶಿ ಕೃಷಿ ವ್ಯವಸ್ಥೆಯನ್ನು ಹಾಳು ಗೆಡವಿ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಸರಕುಗಳನ್ನು ವ್ಯಾಪಾರ ಮಾಡಲು ಮುಂದಾಗಿರುವುದು, ಅವರಿಗೆ ಕೆಂಪು ಹಾಸು ಹಾಕಿ ಸ್ವಾಗತಿಸುತ್ತಿರುವುದು ದೊಡ್ಡ ವಿಪರ್ಯಾಸವೆ ಸರಿ...!!!
- ಹೀಗೆ ಮುಂದುವರೆದರೆ, ನಮ್ಮಪಾರಂಪರಿಕ ಜ್ಞಾನ,ಹಳ್ಳಿ ,ನಮ್ಮ ದನ, ಎಮ್ಮೆ, ಆಡು, ಕುರಿ, ಕೋಳಿ, ಅನ್ನ, ಕಾಳು-ಕಡ್ಡಿ, ಕೂಲಿ-ಕಾರ್ಮಿಕರು, ಅಂಗಡಿ-ಮುಂಗಟ್ಟು, ಇತ್ಯಾದಿಗಳು ಮಾಯವಾಗಿ ಅವರ ಕೃತಕ ಸರಕುಗಳು,ವಿಷಮಿಶ್ರಿತ ಆಹಾರಗಳು, ವಿಷಪೂರಿತ ನಾಶಕಗಳು, ಡ್ರೋನ್ಗಳು, ರೊಬೊಟ್ಗಳು ಮನೆ ಮನೆಗೂ ಬಂದು ನಮ್ಮ ಹಳ್ಳಿಗಳನ್ನು, ಆಹಾರಗಳನ್ನು ಹಾಳುಗೆಡವಿ ನಮ್ಮನ್ನು ನಮ್ಮ ಮಕ್ಕಳನ್ನು, ನಮ್ಮ ಸಮಾಜವನ್ನು ಹಿಂದೆಂದು ಕೇಳರಿಯದಂತಹ ರೋಗಗಳಿಗೆ ತಳ್ಳುತ್ತಾರೆ…!
- ಈ ಎಲ್ಲಾ ಅಂಶಗಳು ಅವರ ತವರೂರಾದ ಅಮೇರಿಕಾ ದೇಶದಲ್ಲೆ ಮಾಡಿ ಮುಗಿಸಿದ್ದಾರೆ… ಅಲ್ಲಿ ಛೀಮಾರಿ ಹಾಕಿಸಿಕೊಂಡು ಈಗ ನಮ್ಮಲ್ಲಿ ದಾಂಗುಡಿ ಇಡುತ್ತಿದ್ದಾರೆ..
- ತನ್ನ ಸ್ವಂತ ತಾಯಿಯ ಗರ್ಭ ಸೀಳಿದ ಪಾಪಿಗಳಿಗೆ ಅನ್ಯರು ಒಂದು ಲೆಕ್ಕವೇ..ಯೋಚಿಸಿ…???
- ಇದನ್ನರಿತು ನಾವುಗಳು ಒಟ್ಟುಗೂಡಿ ಈ ಬಹುರಾಷ್ಟ್ರೀಯ ಕಂಪನಿಗಳನ್ನು ನಮ್ಮ ಕೃಷಿ ಕ್ಷೇತ್ರಕ್ಕೆ ಕಾಲಿಡದಂತೆ ಬುಡಸಮೇತ ಕಿತ್ತೊಗೆಯಬೇಕಿದೆ.
ಸಂಗ್ರಹ–ನಿರೂಪಣೆ: ಪ್ರಶಾಂತ್ ಜಯರಾಮ್, ಕೃಷಿಕರು, ಚಾಮರಾಜನಗರ, ಮೊಬೈಲ್ :9342434530
ಮಾಹಿತಿ ಮೂಲ: ಡಾ ಮಂಜುನಾಥ್, ಸಹಜ ಕೃಷಿ ವಿಜ್ಞಾನಿಗಳು, ಗಾಂಧೀ ಸಹಜ ಬೇಸಾಯ ಶಾಲೆ, ತುಮಕೂರು.
ಈ ಕುಲಾಂತರಿ ಆಹಾರಗಳ ವಿಜ್ಞಾನ ಮತ್ತು ನೀತಿಯ ಕುರಿತಾದ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಲಿಂಕ್ ನಲ್ಲಿ ಓದಬಹುದು
ಕುಲಾಂತರಿ ಸಾಸಿವೆಯ ವಿಜ್ಞಾನದ ಒಳನೋಟ ಏನು??
ಕುಲಾಂತರಿ ಕಳೆನಾಶಕ-ಸಹಿಷ್ಣು ಸಾಸಿವೆಯಿಂದ ಭಾರತದ ಕೃಷಿಗೆ ಮರಣಶಾಸನ
ಭಾರತೀಯ ಕೃಷಿಯು ಇನ್ನು ಮುಂದೆ ಬೇಯರ್ ಕೃಷಿಯಾಗಿ ಬದಲಾಗಲಿದೆ!
ಬೇಯರ್,ಅಮೆಜಾನ್ ಕಂಪನಿಗಳನ್ನು ನಮ್ಮ ಕೃಷಿ ಕ್ಷೇತ್ರದಿಂದ ಬಹಿಷ್ಕಾರಿಸಬೇಕಿದೆ
“ಕುಲಾಂತರಿ ಆಹಾರಗಳ ಅಪಾಯಗಳು” ಸಂಬಂಧದ ಮಾಹಿತಿಯನ್ನು ಪಿಡಿಎಫ್ ಮೂಲಕ ಕೆಳಗಿನ ಲಿಂಕ್ ನಲ್ಲಿ ಡೌನ್ಲೋಡ್ ಮಾಡಬಹುದು
https://booksloka.com/wp-content/uploads/2024/09/Note-on-GM-Seeds.pdf