ನಿಮಗೆ ಗೊತ್ತಿರಲಿ ಬೇಯರ್ (Bayer) ಎಂಬ ಬಹುರಾಷ್ಟ್ರೀಯ ಕಂಪನಿ ನಮ್ಮ ದೇಶದೊಳಗೆ ಕುಲಾಂತರಿ ಕೃಷಿಯ (GMO) ಪದ್ದತಿಯನ್ನು ತರುವುದಕ್ಕೆ ರಾತ್ರಿ ಹಗಲು ಬಹಳಷ್ಟು ಶ್ರಮಿಸುತ್ತಿದೆ. ಸಾವಿರಾರು ಕೋಟಿ ಸುರಿಯುತ್ತಿದೆ. ಮೊನ್ನೆ ಮೊನ್ನೆ ತಾನೇ ಇದರ ಬಗ್ಗೆ ನಮ್ಮ ರಾಜ್ಯದಲ್ಲೂ ಹಲವು ಭಾಗಗಳಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿತ್ತು. ಕುಲಾಂತರಿ ಸಾಸಿವೆ ಎಂಬ ವಿಷಕ್ಕೆ.

ಮೋನ್ಸ್ಯಾಂಟೋ (Monsanto) ಎಂಬ ಇನ್ನೊಂದು ಕಂಪನಿ, ಇದರ ಬಗ್ಗೆ ಅಂತಹ ಪರಿಚಯ ಬೇಕಿಲ್ಲ ಎಂದುಕೊಳ್ಳುತ್ತೇನೆ. ಈ ಕಂಪನಿಯ ಉಸ್ತುವಾರಿ ಬಿಲ್ ಗೇಟ್ಸ್ (Bill Gates). ಈತನದ್ದು ಒಂದು ಮಹತ್ತರ ಕನಸು!! ಏನಪ್ಪಾ ಅಂದ್ರೆ ಇಡೀ ವಿಶ್ವಕ್ಕೆ ಆಹಾರ ಈತ ಒದಗಿಸಬೇಕಂತೆ. ಅದೂ ಕುಲಾಂತರಿ ಬೆಳೆಯ ಮುಖಾಂತರ. ಇನ್ನೊಂದು ಅರ್ಥದಲ್ಲಿ ಇವನು ವಿಶ್ವದ ಆಹಾರವನ್ನು ತನ್ನ ಹಿಡಿತಕ್ಕೆ ತಗೆದುಕೊಳ್ಳಲು ಬಯಸುವ ಮಹಾನುಭಾವ. ತನ್ನ ತವರೂರಾದ ಅಮೆರಿಕದಲ್ಲೇ ಈತನಿಗೆ ಸಹಸ್ರಾರು ಬಾರಿ ಛೀಮಾರಿಯಾಕಿದ್ದಾರೆ.. ಅಲ್ಲಿನ ನ್ಯಾಯಾಂಗ ಈತನಿಗೆ ಸಾವಿರಾರು ಮಿಲಿಯನ್ ಡಾಲರ್ ಪೆನಾಲ್ಟಿ ಹಾಕಿದೆ. ಈತನ ದರಿದ್ರ ರೌಂಡ್ ಅಪ್ ಕಳೆನಾಶಕದಿಂದ ಸಾವಿರಾರು ಜನ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ನರಳುತಿದ್ದಾರೆಂದು.

ಈ ಎರಡೂ ವಿಷಜಂತುಗಳು ಈಗ ಒಂದಾಗಿ – ಬೇಯರ್ ಮೋನ್ಸ್ಯಾಂಟೋಗಳಾಗಿವೆ (Bayer-Monsanto).. ಎರಡು ಮಧ ಆನೆಗಳು ಈಗ ಒಂದಾಗಿವೆ.. ಈಗ ಯಾವ ಸರ್ಕಾರಗಳನ್ನ ಬೇಕಾದರೂ ಮಣಿಸುವ ಶಕ್ತಿ ಹೊಂದಿವೆ.ವಿಶ್ವ ಈಗ ಇವರ ಕೈಯಲ್ಲಿ.. ಇದು ಬರೀ ಮಾತಲ್ಲ – ಕ್ರಿಯೆಯಲ್ಲಿ ಕೂಡ

ನೋಡಿ ಈಗ..

G-20 ಸಭೆಯ ಅಂತಿಮದಲ್ಲಿ ನಮ್ಮ ಕೃಷಿಯ ಕಳಶವೆಂದು ಬಿಂಬಿಸುವ ಭಾರತೀಯ ಕೃಷಿ ಸಂಶೋಧನ ಕೇಂದ್ರ(ICAR) ಈಗ ಇವುಗಳ ಜೊತೆಗೆ ಮೈತ್ರಿ ಮಾಡಿಕೊಂಡಿದೆ.. Bayer Monsanto-Amazon ಇವುಗಳು ನೀಡುವ ಕೃಷಿಯ ಒಳಸುರಿ, ತಂತ್ರಜ್ಞಾನವನ್ನು ಕೃಷಿ ವಿಜ್ಞಾನ ಕೇಂದ್ರದ ಮೂಲಕ ರೈತರಿಗೆ ತಲುಪಿಸುವ ವ್ಯವಸ್ಥೆ!

ಅಮೆಜಾನ್ ಎಂಬ ಮತ್ತೊಂದು ಬಹುರಾಷ್ಟ್ರೀಯ ಕಂಪನಿ: ವಿಕೇಂದ್ರೀಕರಣದತ್ತ ನಾವು ಎಂಬ ರೂಪಕದೊಂದಿಗೆ ಪ್ರತಿ ಮನೆ ಮನೆಗೂ ಸರಕುಗಳನ್ನು ನೀಡುತ್ತೇವೆಂಬ ಭರವಸೆಯೊಂದಿಗೆ ಹಳ್ಳಿ ಹಳ್ಳಿಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಸೀಳು ನಾಯಿಯಂತೆ ಹೊಂಚು ಹಾಕುತ್ತಿರುವ ಕಾಡು ಮೃಗ ಇದಾಗಿದೆ. ಈ ಕಂಪನಿ ಕೂಡ ಒಪ್ಪಂದ ಮಾಡಿಕೊಂಡಿದೆ ನಮ್ಮ ದೇಶದ ಜೊತೆ.. ಅಗ್ರಿಮೆಂಟ್ (Agreement) ಹೀಗೆ ಹೇಳುತ್ತದೆ :

ಸಹಜ ಕೃಷಿಯ ಸುಸ್ಥಿರತೆಗೆ, ವ್ಯಾಪ್ತಿ ದೊಡ್ಡದಾಗಿಸುವುದಕ್ಕೆ, ಎಲ್ಲವನ್ನೂ ಒಳಗೊಳ್ಳಿಸುವುದಕ್ಕೆ, ಸಂಪನ್ಮೂಲಗಳ ಅಭಿವೃದ್ಧಿಗೆ, ರೈತರ ಸಬಲೀಕರಣಕ್ಕೆ

ಅಪೌಷ್ಠಿಕತೆಯ ಭದ್ರತೆಗೆ ಹೀಗೆ ಹಲವು ರೂಪಕಗಳನ್ನು ಕೊಟ್ಟು ಒಟ್ಟಿನಲ್ಲಿ ಸಹಜ ಕೃಷಿ ಎಂಬ ಬೌದ್ಧಿಕ ವಿಚಾರವನ್ನು ವಿಷ ಜಂತುಗಳ ಪಾಲಾಗಿಸಲು ನಮ್ಮ ರಾಜಕೀಯ ಪಕ್ಷಗಳು, ಸಂಶೋಧನಾ ಕೇಂದ್ರಗಳು ಹಾಗೂ ಇನ್ನಿತರೇ ಅಂಗ ಸಂಸ್ಥೆಗಳು ಸಾಲು ಸಾಲಾಗಿ ಶಿರ ಬಾಗಿ ಅವರು ಬಿಸಾಕುವ ಎಂಜಲು ಕಾಸಿಗೆ ನಾಯಿಗಳಂತೆ ನಮ್ಮ ದೇಶದ ಕೃಷಿಯನ್ನು ಅಡವಿಡುತ್ತಿರುವುದು ಶೋಚನೀಯ ಸಂಗತಿ..

ಅಂದು ಈಸ್ಟ್ ಇಂಡಿಯಾ ಕಂಪನಿ, ಇಂದು ಬಹುರಾಷ್ಟ್ರೀಯ ಕಂಪನಿ

ಮತ್ತೆ ಗುಲಾಮಗಿರಿಯತ್ತ ಭಾರತ…!!

 

ಸಂಗ್ರಹನಿರೂಪಣೆ: ಪ್ರಶಾಂತ್ ಜಯರಾಮ್, ಕೃಷಿಕರು, ಚಾಮರಾಜನಗರ, ಮೊಬೈಲ್ :9342434530

ಮಾಹಿತಿ ಮೂಲ: ಡಾ ಮಂಜುನಾಥ್, ಸಹಜ ಕೃಷಿ ವಿಜ್ಞಾನಿಗಳು, ಗಾಂಧೀ ಸಹಜ ಬೇಸಾಯ ಶಾಲೆ, ತುಮಕೂರು.

ಈ ಕುಲಾಂತರಿ ಆಹಾರಗಳ ವಿಜ್ಞಾನ ಮತ್ತು ನೀತಿಯ ಕುರಿತಾದ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಲಿಂಕ್ ನಲ್ಲಿ ಓದಬಹುದು

ಕುಲಾಂತರಿ ಆಹಾರಗಳ ಅಪಾಯಗಳು!

ಕುಲಾಂತರಿ ಸಾಸಿವೆಯ ವಿಜ್ಞಾನದ ಒಳನೋಟ ಏನು??

ಕುಲಾಂತರಿ ಕಳೆನಾಶಕ-ಸಹಿಷ್ಣು ಸಾಸಿವೆಯಿಂದ ಭಾರತದ ಕೃಷಿಗೆ ಮರಣಶಾಸನ

ಭಾರತೀಯ ಕೃಷಿಯು ಇನ್ನು ಮುಂದೆ ಬೇಯರ್ ಕೃಷಿಯಾಗಿ ಬದಲಾಗಲಿದೆ!

ಬೇಯರ್,ಅಮೆಜಾನ್ ಕಂಪನಿಗಳನ್ನು ನಮ್ಮ ಕೃಷಿ ಕ್ಷೇತ್ರದಿಂದ ಬಹಿಷ್ಕಾರಿಸಬೇಕಿದೆ

ಕುಲಾಂತರಿ ಆಹಾರಗಳ ಅಪಾಯಗಳು” ಸಂಬಂಧದ ಮಾಹಿತಿಯನ್ನು ಪಿಡಿಎಫ್ ಮೂಲಕ ಕೆಳಗಿನ ಲಿಂಕ್ ನಲ್ಲಿ ಡೌನ್ಲೋಡ್ ಮಾಡಬಹುದು

https://booksloka.com/wp-content/uploads/2024/09/Note-on-GM-Seeds.pdf

Leave a Reply

Your email address will not be published. Required fields are marked *

Close
Sign in
Close
Cart (0)

No products in the cart. No products in the cart.





0