Sale!

ಈ ನೆಲದ ಬದುಕು

ಲೇಖಕರು : ಮಲ್ಲಿಕಾರ್ಜುನ ಹೊಸಪಾಳ್ಯ
ಪ್ರಕಾಶನ : ಧಾನ್ಯ ಪ್ರಕಾಶನ

126.00

9 in stock

About The Author

Mallikarjuna Hosapalya

Mallikarjuna Hosapalya

ಮಲ್ಲಿಕಾರ್ಜುನ ಹೊಸಪಾಳ್ಯ
ಹುಟ್ಟೂರು ತುಮಕೂರು ಜಿಲ್ಲೆ ಹೊಸಪಾಳ್ಯ. ಒಕ್ಕಲುತನದ ಕುಟುಂಬ, ಮಧುಗಿರಿ, ತುಮಕೂರು, ಬೆಂಗಳೂರು ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ, ಅರ್ಥಶಾಸ್ತ್ರ ಹಾಗೂ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರಾಂಕ್ನೊಂದಿಗೆ ಎರಡು ಚಿನ್ನದ ಪದಕ ಮತ್ತು ಪದವಿಯಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚಿನ ಅಂಕ ಗಳಿಕೆಗಾಗಿ ಟಿ.ಪಿ.ಕೈಲಾಸo ಚಿನ್ನದ ಪದಕ, ದೇಸಿ ತಳಿ,ನಾಟಿ ಬೀಜಗಳ ಸಂರಕ್ಷಣೆ ಕುರಿತು ವಿಶೇಷ ಆಸಕ್ತಿ, ಜಲಸಂರಕ್ಷಣೆ, ಸುಸ್ಥಿರಕೃಷಿ, ಸಿರಿಧಾನ್ಯ ಚಟುವಟಿಳಿಗಳಿಗೆ ಬೆಂಬಲ: ಜಲಜಾಗೃತಿಗಾಗಿ ಕಾರ್ಯಕ್ರಮ ಸಂಘಟನೆ: ಪಾರುಪರಿಕ ಜಲನಿಧಿಗಳಾದ ತಲಪರಿಗೆ ಬಗ್ಗೆ ಅಧ್ಯಯನ: ಪುನರುಜೀವನಕ್ಕಾಗಿ ಪರಿಶ್ರಮ. ವಿವಿಧ ಸಂಸ್ಥೆ ಹಾಗೂ ಸರ್ಕಾರಿ ಯೋಜನೆಗಳಲ್ಲಿ ದಾಖಲಾತಿ ಸಮಾಲೋಚಕ ವೃತ್ತಿ. ಹವ್ಯಾಸಿ ಬರಹಗಾರ, ಕನ್ನಡ ಪ್ರಭ, ವಿಜಯಕರ್ನಾಟಕ ಹಾಗೂ ಉದಯವಾಣಿ ಪತ್ರಿಕೆಗಳಲ್ಲಿ ಕೃಷಿ ವಿಚಾರಗಳ ಅಂಕಣ ಬರವಣಿಗೆ. ಪ್ರಬಂಧ ಹಾಗೂ ಕಥೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟ. ಕೃಷಿ ಮಾಧ್ಯಮ ಕೇಂದ್ರದ ಕೃಷಿ ಪತ್ರಿಕೋದ್ಯಮ ಪ್ರಶಸ್ತಿ, ಸಿಡಿಎಲ್ ಸಂಸ್ಥೆಯ 'ಚರಕ' ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ 'ಮುರುಘಾಶ್ರೀ' ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಸುಕೃತ ಕೃಷಿ ಬರಹಗಾರ ಪ್ರಶಸ್ತಿ,ಪುರಸ್ಕೃತ. ತೇಜಸ್ವಿ ನೆನಪಲ್ಲಿ ಅಲ್ಮೆರಾ ರಿಪೇರಿ ಪ್ರಬಂಧಗಳ ಪ್ರಸ್ತಕವೂ ಸೇರಿದಂತೆ, ಕೃಷಿ ಮತ್ತು ನೀರಿಗೆ ಸಂಬಂಧಪಟ್ಟ ನೆಟ್ಟಿರಾಗಿ, ಕೃಷಿ ಆಚರಣೆ, ಪೈರುಪಚ್ಚೆ , ಕೊರಲೆ, ಚೌಳು ನೆಲದ ಬಂಗಾರ, ಸಿರಿಧಾನ್ಯ ಪರಂಪರೆ, ನಶಿಸುತ್ತಿರುವ ನೀರಿನ ಜ್ಞಾನ, ತಲಪರಿಗೆ ಇತ್ಯಾದಿ.

ಈ ನೆಲದ ಬದುಕು | Ee Nelada Baduku

Written by Mallikarjuna Hosapalya

Published by Dhanya Prakashana

Reviews

There are no reviews yet.

Be the first to review “ಈ ನೆಲದ ಬದುಕು”

Your email address will not be published. Required fields are marked *