Description
ರಾಗಿ ತಿಂದವರು ನಿರೋಗಿ | Ragi Tindavaru Nirogi
Author : G.Krishna Prasad
Publication : Sahaja Samrudha
ಒಂದಷ್ಟು ವರ್ಷಗಳ ಕಾಲ ಆಹಾರ ಪದ್ದತಿಯಿಂದ ದೂರ ಸರಿದಿದ್ದ ರಾಗಿ, ಮರಳಿ ಬಂದಿದೆ. ರಾಗಿಯನ್ನು ಆಹಾರದ ಮುಖ್ಯ ಭಾಗವಾಗಿಸಿಕೊಂಡ ಹಲವು ಸಮುದಾಯಗಳು ನಮ್ಮ ದೇಶದಲ್ಲಿದೆ. ಆಫ್ರಿಕಾದಲ್ಲಿ ಜನ್ಮತಳೆದ ರಾಗಿ ಭಾರತದಲ್ಲಿ ವಿಕಸಿತಗೊಂಡ ಪರಿ ಗಮನಿಸಿದರೆ ಅದು ನಮ್ಮ ನೆಲದ ಧಾನ್ಯವೇನೋ ಎಂಬಷ್ಟರ ಮಟ್ಟಿಗೆ ಆಹಾರದಲ್ಲಿ ಬೆರೆತುಹೋಗಿದೆ.
ಹವಾಮಾನ ವೈಪರೀತ್ಯದ ಬಿಕ್ಕಟ್ಟಿನ ಈ ಸಮಯದಲ್ಲಿ ರಾಗಿ ಬೆಳೆ ಈ ಸಮಸ್ಯೆಗೆ ಉತ್ತರ ಕೊಡುತ್ತದೆ. ಕಡಿಮೆ ನೀರು, ವಾತಾವರಣದ ಏರುಪೇರು ಸಹಿಸಿಕೊಂಡು ಬೆಳೆಯುವ ಈ ಧಾನ್ಯ ರೈತರಿಗೆ ಖಚಿತ ಆದಾಯದ ಭರವಸೆ ನೀಡುತ್ತದೆ.
ರಾಗಿಯನ್ನು ಕೇಂದ್ರವಾಗಿಟ್ಟುಕೊಂಡು ‘ಅಕ್ಕಡಿ’ ಪದ್ದತಿಯು ಅತ್ಯಂತ ವೈಜ್ಞಾನಿಕ ಹಾಗೂ ಜನರ ಸಾಂಪ್ರದಾಯಿಕ ಜ್ಞಾನಕ್ಕೆ ನಿದರ್ಶನವಾಗಿದೆ. ರಾಗಿ ಜೊತೆಗೆ ಇತರ ಧಾನ್ಯಗಳನ್ನು ಒದಗಿಸುವ ಈ ಪದ್ದತಿಯು ಇಡೀ ಕುಟುಂಬಕ್ಕೆ ಆಹಾರ ಭದ್ರತೆ ಕೊಡಬಲ್ಲದು.
Reviews
There are no reviews yet.