9%

ಪರ್ಮಾಕಲ್ಚರ್

ಕನ್ನಡ ಅನುವಾದ ವಿ ಗಾಯತ್ರಿ
ಪ್ರಕಾಶನ : ಇನ್ಸ್ಟಿಟ್ಯೂಟ್ ಫಾರ್ ಕಲ್ಚರಲ್ ರೆಸರ್ಚ್ ಅಂಡ್ ಆಕ್ಷನ್ (ಇಕ್ರಾ)

205.00 225.00

In stock

Add to wishlist Adding to wishlist Added to wishlist

ಪರ್ಮಾಕಲ್ಚರ್ | Permaculture

Experience of Ardhendu S Chatterjee on Permaculture

Translated by V Gayathri

Published by Institute of Cultural and Research Action (ICRA)

**

ಅರ್ಧೆಂದು ಎಸ್ ಚಟರ್ಜಿ

ಪರಿಸರಸ್ನೇಹಿ ಕೃಷಿಯ ಕಟ್ಟಾ ಪ್ರತಿಪಾದಕ ಅರ್ಧೆಂದು ಎಸ್. ಚಟರ್ಜಿ ಅವರ ಹೆಸರು ಪರ್ಮಾಕಲ್ಬರ್‌ಗೆ ಅನ್ವರ್ಥ ಎನ್ನುವಮಟ್ಟಿಗೆ ಬಗ್ಗಿ ಹೋಗಿದೆ. ಮೂರು ದಶಕಗಳಿಂದ ಭಾರತ, ಜಪಾನ್, ಕಾಂಬೋಡಿಯಾ, ವಿಯಟ್ನಾಂ ಇನ್ನೂ ಮುಂತಾದ ದೇಶಗಳಲ್ಲಿ ಪರ್ಮಾಕಲ್ಟರ್ ಕಲಿಸುತ್ತಾ, ಅದರ ತತ್ವಗಳನ್ನು ಅಲ್ಲಿನ ಸನ್ನಿವೇಶಗಳಿಗೆ ಒಗ್ಗಿಸಿಬಿಟ್ಟಿದ್ದಾರೆ. ಸ್ಥಳೀಯ ಸ್ಥಿತಿಗತಿಗಳನ್ನು ಯಥಾವತ್ತಾಗಿ ಗ್ರಹಿಸುವ ಅವರು, ಹೇಳಬೇಕಾದ ಎಲ್ಲವನ್ನೂ ರಟ್ಟಿನ ಹಾಳೆ ಇಲ್ಲವೇ ಕರಿಹಲಗೆಯ ಮೇಲೆ ಗೆರೆಗಳಲ್ಲಿಯೇ ಮೂಡಿಸಿಬಿಡುತ್ತಾರೆ. ಇಂತಹ ಅಸಾಧಾರಣ ಗುಣಗಳೇ ಅವರನ್ನೊಬ್ಬ ಶ್ರೇಷ್ಠ ಶಿಕ್ಷಕರನ್ನಾಗಿಸಿವೆ. ಸಣ್ಣ ರೈತರ ಸಹಜ ಪಕ್ಷಪಾತಿಯಾದ ಇವರು ತುಂಡು ಜಮೀನುಗಳನ್ನು ಉತ್ಪಾದನಾಶೀಲವಾಗಿಸುವ ತಂತ್ರಗಳನ್ನು, ವಿನ್ಯಾಸಗಳನ್ನು ದಣಿವರಿಯದೆ ರೂಪಿಸುತ್ತಾ ಬಂದಿದ್ದಾರೆ.

ಕೊಲ್ಕತ್ತಾ ವಿಶ್ವವಿದ್ಯಾಲಯದಿಂದ ಬಿ.ಕಾಂ. ಪದವಿ ಪಡೆದ ಅರ್ಧೆಂದು, ನಂತರ ಜಪಾನಿನ ‘ಏಷಿಯನ್ ರೂರಲ್ ಇನ್ಸಿಟ್ಯೂಟ್’ನಲ್ಲಿ ಗ್ರಾಮೀಣ ಮುಂದಾಳತ್ವ ಮತ್ತು ಕೃಷಿ ಅಭಿವೃದ್ಧಿಯಲ್ಲಿ ಡಿಪ್ಲೊಮಾ ಪದವಿ ಪಡೆಯುತ್ತಾರೆ. ಜೊತೆಯಲ್ಲೇ ಛಾಯಾಗ್ರಹಣದಲ್ಲಿ ಉನ್ನತ ಶಿಕ್ಷಣ ಪೂರೈಸುವ ಜೊತೆಗೆ ಜಪಾನಿನ ಭತ್ತದ ತಜ್ಞ ಡಾ. ಕೆ. ಮಕಿನೊ ಅವರಿಂದ ವಿಶೇಷ ಶಿಕ್ಷಣ ಪಡೆಯುತ್ತಾರೆ. ಕೆಲ ವರ್ಷಗಳ ಕಾಲ ಪಾಂಡಿಚೇರಿಯ ಆರೋವಿಲ್‌ನಲ್ಲಿದ್ದು ನೆದರ್‌ಲ್ಯಾಂಡ್ಸ್‌ನ ‘ಇಟಿಸಿ ಫೌಂಡೇಷನ್’ನವರ ಪರಿಸರಾಧಾರಿತ ಕೃಷಿ ತರಬೇತಿ, ಆಸ್ಟ್ರೇಲಿಯಾದ ತಜ್ಞರಿಂದ ಪರ್ಮಾಕಲ್ಟರ್ ಶಿಕ್ಷಕರ ತರಬೇತಿಯನ್ನು ಪೂರೈಸುತ್ತಾರೆ.

ತುಂಡುಭೂಮಿ ಅಭಿವೃದ್ಧಿ ಮತ್ತು ಗ್ರಾಮೀಣ ಬಡಜನರ ಉನ್ನತಿಗಾಗಿ ಅರ್ಧೆಂದು ಅವರು ಪಶ್ಚಿಮ ಬಂಗಾಳದಲ್ಲಿ ಸ್ಥಾಪಿಸಿದ ಡಿಆರ್‌ಸಿಎಸ್ಸಿ (ಡೆವೆಲಪ್ ಮೆಂಟ್ ರಿಸರ್ಚ್ ಕಮ್ಯುನಿಕೇಶನ್ ಅಂಡ್ ಸರ್ವಿಸಸ್ ಸೆಂಟರ್) ಇಂದು ಓಡಿಸ್ಸಾ ಒಳಗೊಂಡಂತೆ ಅನೇಕ ಉತ್ತರದ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದೆ. ಪ್ರಪಂಚದ ವಿವಿಧೆಡೆ ತುಂಡುಭೂಮಿ ಮತ್ತು ಸುಸ್ಥಿರ ಗ್ರಾಮೀಣ ಅಭಿವೃದ್ಧಿ ಯೋಜನೆಗಳಿಗೆ ಅವರು ಸಲಹೆಗಾರರಾಗಿದ್ದಾರೆ. ಕರ್ನಾಟಕದಲ್ಲಿ ‘ಇಕ್ರಾ’ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ಸುಸ್ಥಿರ ಕೃಷಿ ಸಂಘಟನೆಗಳ ಮೂಲಕ ರೈತರಿಗೆ ನಿರಂತರವಾಗಿ ತರಬೇತಿಗಳನ್ನು ನಡೆಸುತ್ತಾ ಬಂದಿದ್ದಾರೆ. ಜಪಾನಿನ ‘ಎಆರ್‌ಐ’ನಲ್ಲಿ ಸತತ ಆರು ವರ್ಷಗಳ ಕಾಲ ನೂರಾರು ಅಂತರರಾಷ್ಟ್ರೀಯ ತಂಡಗಳಿಗೆ ಪರಿಸರಸ್ನೇಹಿ ಕೃಷಿ ತರಬೇತಿ ನೀಡಿದ್ದಾರೆ. ಭಾರತ ಮತ್ತು ವಿವಿಧ ದೇಶಗಳಲ್ಲಿ ಆನೇಕ ಕೃಷಿ ವಿಶ್ವವಿದ್ಯಾಲಯಗಳಿಗೆ ಸುಸ್ಥಿರ ಕೃಷಿ ಸಲಹೆಗಾರರಾಗಿದ್ದಾರೆ. ಎಫ್‌ಒ. ವಿಶ್ವಸಂಸ್ಥೆ, ವಿವಿಧ ಅಂತರರಾಷ್ಟ್ರೀಯ ದತ್ತಿ ಸಂಸ್ಥೆಗಳಲ್ಲಿ 25 ವರ್ಷಗಳಿಂದ ಭಾರತವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ.

Reviews

There are no reviews yet.

Be the first to review “ಪರ್ಮಾಕಲ್ಚರ್”

Your email address will not be published. Required fields are marked *

You may also like…