ಹೀಗೊಂದು ಕೃಷಿ ಸಂಹಿತೆ | Heegondu Krushi samhithe
Written by Albert Howerd
Translated by Valmiki
Published by Institute for Cultural Research and Action
**
ಆಲ್ಬರ್ಟ್ ಹೋವರ್ಡ್ ಅವರಿಗೆ ಮಣ್ಣಿನ ರೋಗ ಮತ್ತು ಮಾನವ ಆರೋಗ್ಯಗಳು ಬೇರೆ ಬೇರೆಯಲ್ಲ. ಅವೆರಡೂ ಒಂದೇ ಪ್ರಕ್ರಿಯೆಯ ಭಾಗಗಳು. ಇದನ್ನು ಸಾಧಿಸುವುದು ಸಾಧ್ಯವೇ? ಸಾಧ್ಯವೆನ್ನುತ್ತಾರೆ ಹೋವರ್ಡ್. ಎಪ್ಪತ್ತು ವರ್ಷಗಳ ಹಿಂದೆ ಭಾರತದಲ್ಲಿ ನಡೆಸಿದ ಪ್ರಯೋಗಗಳನ್ನು ಆಧರಿಸಿದ ತಮ್ಮ ಅಪ್ರತಿಮ ಪುಸ್ತಕ ‘ಹೀಗೊಂದು ಕೃಷಿ ಸಂಹಿತೆ’ಯಲ್ಲಿ ಇದನ್ನು ಹಂತಹಂತವಾಗಿ ತೋರಿಸಿಕೊಡುತ್ತಾರೆ. ಹೋವರ್ಡ್‌ಗೆ ಪ್ರಕೃತಿಯೇ ಪರಮ ಗುರು. ಮಣ್ಣೆ ಮೂಲ ಬಂಡವಾಳ, ಇದನ್ನಾಧರಿಸಿಯೇ ನಾವು ಬೇಸಾಯ ಮಾತ್ರವಲ್ಲ, ಬದುಕಿನೆಡೆಗೆ ಒಂದು ನವೀನ ಧೋರಣೆ ರೂಪಿಸಬಹುದೆನ್ನುತ್ತಾರೆ ಅವರು.
‘ಹೀಗೊಂದು ಕೃಷಿ ಸಂಹಿತೆ’ಯು ರಾಸಾಯನಿಕಮಯ ಆಧುನಿಕ ಕೃಷಿಯ ದೋಷಗಳನ್ನು ಮುಚ್ಚುಮರೆಯಿಲ್ಲದೆ ಬಯಲಾಗಿಸುತ್ತದೆ. ಶಿಲೀಂದ್ರ ತಜ್ಞರು, ಕೀಟತಜ್ಞರು, ಸೂಕ್ಷ್ಮಜೀವಿ ತಜ್ಞರು, ಕೃಷಿ ರಸಾಯನಶಾಸ್ತ್ರಜ್ಞರು ಮತ್ತು ಕೀಟನಾಶಕಗಳು, ಕಳೆನಾಶಕಗಳು, ಹುಳುನಾಶಕಗಳು… ಇತ್ಯಾದಿ, ಇತ್ಯಾದಿಗಳನ್ನೆಲ್ಲ ಹತ್ತಿರ ಸುಳಿಯಲೂ ಬಿಡದೆ ರೋಗ ಮುಕ್ತ ಬೆಳೆಯನ್ನು ಹೇಗೆ ಬೆಳೆಯಬಹುದೆಂದು ಹೋವರ್ಡ್ ತೋರಿಸಿಕೊಡುತ್ತಾರೆ. ಸ್ವಸ್ಥ ಕೃಷಿ ಮತ್ತು ಸ್ವಸ್ಥ ಬದುಕಿಗಾಗಿ ಓದಲೇಬೇಕಾದ ಪುಸ್ತಕ ಇದು.
Reviews
There are no reviews yet.