ಸಾವಯವ ಕೃಷಿ | Savayava Krishi
Written by Narendra Rai Derla
Published by Pustaka prakashana
ವಿಶ್ವದಾದ್ಯಂತ ಇಂದು ಅನೇಕ ಕೃಷಿ ಪದ್ಧತಿಗಳನ್ನು ಕುರಿತು ಚರ್ಚೆ ನಡೆಯುತ್ತಿದೆ. ಇವುಗಳಲ್ಲಿ ಮೂರು ಪ್ರಧಾನವಾದವು. ರಾಸಾಯನಿಕ ಕೃಷಿ, ಸಾವಯವ ಕೃಷಿ, ಸಹಜ ಕೃಷಿ. ರಾಸಾಯನಿಕ ಕೃಷಿಯ ಅಪಾಯಗಳನ್ನು ಮನಗಂಡ ಅಭಿವೃದ್ಧಿ ಶೀಲ ದೇಶಗಳು ಇಂದು ಸಾವಯವ ಕೃಷಿಯತ್ತ ಹೊರಳುತ್ತಿವೆ. ಆಧುನಿಕ ಸಂದರ್ಭದಲ್ಲಿ ಈ ಕೃಷಿ ಪದ್ಧತಿಗಳನ್ನು ಹೇಗೆ ರೂಢಿಸಬಹುದು? ಅದರ ಸಾಧಕ ಬಾಧಕಗಳೇನು? ಇತ್ಯಾದಿಗಳನ್ನು ಉದಾಹರಣೆ ಸಹಿತವಾಗಿ ಶ್ರೀ ನರೇಂದ್ರ ರೈ ದೇರ್ಲ ಈ ಪುಸ್ತಕದಲ್ಲಿ ವಿವರಿಸಿದ್ದಾರೆ. ಕೃಷಿ ಉತ್ಪಾದನೆಯಲ್ಲಿ ದೇಶ ಸಂಪೂರ್ಣ ಸ್ವಾವಲಂಬಿಯಾಗಿದ್ದರೂ ಕೃಷಿಕರು ಮಾತ್ರ ರಾಸಾಯನಿಕ ಕೃಷಿ ದೆಸೆಯಿಂದ ನೂರಾರುತರದ ಸಾಲಸೋಲಗಳಲ್ಲಿ ಮುಳುಗಿ ಪರಾವಲಂಬಿ ಗಳಾಗಿರುವ ಈ ಸಂದರ್ಭದಲ್ಲಿ ನಮ್ಮ ಗ್ರಾಮಗಳಿಗೆ ನರೇಂದ್ರ ರೈ ಯವರ ಸಹಜ ಕೃಷಿ ಪುಸ್ತಕ ತಮ್ಮ ದುರ್ದೆಸೆಯಿಂದ ಹೊರಬರುವ ದಾರಿ ದೀಪವಾಗಲೆಂದು ಹಾರೈಸುತ್ತೇವೆ.
-ಪ್ರಕಾಶಕ
Reviews
There are no reviews yet.