10%

ಸಕಲರಿಗೂ ಸಮೃದ್ಧಿ

ಲೇಖಕರು : ಶ್ರೀಪಾದ ಎ. ದಾಬೋಲ್ಕರ್
ಅನುವಾದ : ಆರ್. ಶೈಲಜಾ
ಪ್ರಕಾಶನ : ಇನ್ಸ್ಟಿಟ್ಯೂಟ್ ಫಾರ್ ಕಲ್ಚರಲ್ ರಿಸರ್ಚ್ ಅಂಡ್ ಆಕ್ಷನ್ (ಇಕ್ರಾ )

90.00 100.00

In stock

Add to wishlist Adding to wishlist Added to wishlist

ಸಕಲರಿಗೂ ಸಮೃದ್ಧಿ| Sakalarigu Samridhi

Written by Shripada A. Dabolkar

English version of the book can be downloaded here

Translated by R. Shailaja

Published by Institute for Cultural Research and Action

**

ಶ್ರೀಪಾದ ಎ ದಾಬೊಲ್ಕರ್

ಮೂಲತಃ ಗಣಿತಶಾಸ್ತ್ರದ ಶಿಕ್ಷಕರಾದ ದಾಬೊಲ್ಕರ್ ಅವರು ಶಿಕ್ಷಣದೆಡೆಗೆ ಹೊಂದಿದ ದೃಷ್ಟಿಕೋನ ಅನನ್ಯವಾದುದು. ಶಿಕ್ಷಣವನ್ನು ಗ್ರಾಮದಲ್ಲಿನ ಒಬ್ಬ ಸಾಮಾನ್ಯ ಕೆಲಸಗಾರನ ಬದುಕನ್ನು ಆಮೂಲಾಗ್ರವಾಗಿ ಪರಿವರ್ತಿಸುವಂಥ ಒಂದು ಸಾಧನವನ್ನಾಗಿಸುವಲ್ಲಿ ಅವರು ಶ್ರಮಿಸಿದರು.

ಶುದ್ಧ ಅಸಲೀ ಚಿಂತನೆಯ ರೀತಿಯಾದ ಇವರು, ಯಾರೂ ತುಳಿಯದ ಹಾದಿಯನ್ನು ಆರಿಸಿಕೊಳ್ಳುವ ಗುಂಡಿಗೆ ಹೊಂದಿದವರು. ಸಾಂಪ್ರದಾಯಿಕ ಅಕಾಡೆಮಿಕ್ ವ್ಯವಸ್ಥೆಯಲ್ಲಿ 25 ವರ್ಷಗಳ ಕಾಲ ಶಿಕ್ಷಕನಾಗಿದ್ದು ಅಲ್ಲಿನ ಮಿತಿಗಳನ್ನು ಬಹಳ ಚೆನ್ನಾಗಿ ಬಲ್ಲ ಇವರು ನಿವೃತ್ತಿಗೆ ಮುನ್ನವೇ ಅದನ್ನು ತೊರೆದರು.

ವಿಜ್ಞಾನವನ್ನು ದಂತಗೋಪುರವಾಸಿಗಳ ಸಾಂಪ್ರದಾಯಿಕ ತಿಳುವಳಿಕೆಯ ಮಿಥೈಯಿಂದ ಬಿಡುಗಡೆಗೊಳಿಸಿ, ಜ್ಞಾನ ಸಂವಹನೆಯಲ್ಲಿ ನವೀನವೂ, ಅನೌಪಚಾರಿಕವೂ ಆದ ವಿಧಾನಗಳನ್ನು ಅಳವಡಿಸಿ ರೈತರಿಗೆ ಶಿಕ್ಷಣ ನೀಡುವುದು ಅವರ ಗುರಿಯಾಗಿದ್ದಿತು. ಮೊದಲಿಗೆ ಈ ಹಾದಿಯಲ್ಲಿ ಅವರು ಏಕಾಂಗಿ ಪ್ರಚಾರಾಂದೋಲಕರಾಗಿ ಪಯಣಿಸಬೇಕಾಯಿತು. ಆದರೆ, ದೃಢ ನಿಶ್ಚಯದ ಸಾಕಾರಮೂರ್ತಿಯಾದ ದಾಬೋಲ್ಕರ್ ಅವರು ಗ್ರಾಮದಲ್ಲಿನ ಕಟ್ಟಕಡೆಯ ರೈತನನ್ನು ತಲುಪಿ ಆತನ ಹೊಲದಲ್ಲಿ ಆತನ ಸಮಸ್ಯೆಗಳಿಗೆ ಪರಿಹಾರ ಹುಡುಕಲು ನಿರ್ಧರಿಸಿದರು. ರೈತ ಸಮೂಹದಲ್ಲಿ ಆಸಕ್ತಿ ಹುಟ್ಟಿಸಿ ಅರಿವು ಮೂಡಿಸುವಲ್ಲಿ ಅವರು ಯಶಸ್ವಿಯಾದರು.

ಈ ರೈತರು ನಂತರ ‘ಪ್ರಯೋಗ ಪರಿವಾರ’ಗಳೆನ್ನುವ ತಮ್ಮದೇ ಪ್ರಯೋಗಶೀಲ ಗುಂಪುಗಳನ್ನು ನಿರ್ಮಿಸಿಕೊಂಡು ದಾಬೋಲ್ಕರ್ ಅವರ ಅನುಪಸ್ಥಿತಿಯಲ್ಲೂ ಕಾರ್ಯ ನಿರ್ವಹಿಸತೊಡಗಿದರು. ಈ ರೈತರ ಸಂಪರ್ಕ ಜಾಲ ಎಷ್ಟು ಉತ್ಕೃಷ್ಟವಾದದ್ದೆಂದರೆ, ವಿಜ್ಞಾನ ಮತ್ತು ಶಿಕ್ಷಣದ ಹೊಸ ಸಮಾಜಶಾಸ್ತ್ರವನ್ನೇ ಹುಟ್ಟುಹಾಕಿತು; ಹೊಸ ದಿಗಂತವನ್ನೇ ತೆರೆಯಿತು.

ದಾಬೊಳ್ಳರ್ ಅವರು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ತಸಗಾಂ ಎಂಬ ಗ್ರಾಮದಲ್ಲಿ ತಮ್ಮ ದ್ರಾಕ್ಷಿ ಬೆಳೆಗಾರರ ಜತೆ ಕಾಯಕವನ್ನು ಪ್ರಾರಂಭಿಸಿದರು. ಬಲುಬೇಗ ಆ ಜಿಲ್ಲೆಯ ಉತ್ಪನ್ನ ಹೆಚ್ಚಿ ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿತು. ದ್ರಾಕ್ಷಿ ಬೆಳೆ ಒಬ್ಬ ಸಣ್ಣ ರೈತನಿಗೆ ಕೂಡ ಲಾಭದಾಯಕವಾಗಿ ಪರಿಣಮಿಸಿತು. ದ್ರಾಕ್ಷಿಯಿಂದ ಪ್ರಾರಂಭಿಸಿ ಬೇಗದರಲ್ಲೇ ಇತರ ಹಣ್ಣು ಮತ್ತು ಇತರ ಬೆಳೆಗಳಿಗೆ ಈ ವಿಧಾನವನ್ನು ದಾಬೊಳ್ಳರ್ ವಿಸ್ತರಿಸಿದರು.

Reviews

There are no reviews yet.

Be the first to review “ಸಕಲರಿಗೂ ಸಮೃದ್ಧಿ”

Your email address will not be published. Required fields are marked *

You may also like…