10%

ಸಾವಯವ ಬೇಸಾಯದ ರೀತಿ ರಿವಾಜು

ಲೇಖಕರು : ಬರ್ನಾಡ್ ಡಿಕ್ಲರ್ಕ್
ಅನುವಾದ : ಆರ್. ಶೈಲಜಾ
ಪ್ರಕಾಶನ : ಇನ್ಸ್ಟಿಟ್ಯೂಟ್ ಫಾರ್ ಕಲ್ಚರಲ್ ರಿಸರ್ಚ್ ಅಂಡ್ ಆಕ್ಷನ್ (ಇಕ್ರಾ )

72.00 80.00

In stock

Add to wishlist Adding to wishlist Added to wishlist

ಸಾವಯವ ಬೇಸಾಯದ ರೀತಿ ರಿವಾಜು | Savayava Besayada Reeti Rvaju

Author : Bernerd Declercq

Translated by R. Shailaja

Published by Institute for Cultural Research and Action

**

ಬರ್ನಾಡ್ ಡಿಕ್ಲರ್ಕ್ ಅವರ ಲೇಖನಿಯಿಂದ ರೂಪು ತಳೆದ 5 ಅಧ್ಯಾಯಗಳು ಈ ವುಸ್ತಕದಲ್ಲಿವೆ. ಮೊದಲ ಅಧ್ಯಾಯದಲ್ಲಿ ಮಣ್ಣಿಗೆ ಸಂಬಂಧಿಸಿದಂತೆ ತೀರಾ ಮಿತಿಯುಳ್ಳ ಎನ್‌ಕೆ ತಂತ್ರಜ್ಞಾನವು ಹೇಗೆ ಪರ್ಯಾಯ ಚಿಂತನೆಗಳನ್ನೆಲ್ಲಾ ಮೂಲೆಗುಂಪಾಗಿಸಿತು ಮತ್ತು ಇದರ ಹರಿಕಾರ ‘ವಾನ್ ಲೀಬೀಗ್’ ಅವರೇ ಕೊನೆಗೆ ಹೇಗೆ ತನ್ನ ವಿಚಾರಗಳನ್ನು ಬದಲಿಸಿಕೊಳ್ಳಬೇಕಾಯಿತು ಎಂಬುದನ್ನು ಚರ್ಚಿಸುತ್ತಾರೆ. ಎರಡನೇ ಅಧ್ಯಾಯದಲ್ಲಿ ಮಣ್ಣಿಗೆ ನಿಜವಾಗಿಯೂ ಬೇಕಾದದ್ದು ಏನು? ಎಂದು ಬರ್ನಾಡ್ ಪರೀಕ್ಷಿಸುತ್ತಾರೆ. ಮುಂದಿನ ಅಧ್ಯಾಯಗಳಲ್ಲಿ, ಸಾವಯವ ಕೃಷಿಯ ವಿಧಿ-ವಿಧಾನಗಳನ್ನು ಹಂತಹಂತವಾಗಿ ವಿವರಿಸುತ್ತಾ ಅದನ್ನು ಅಳವಡಿಸಿಕೊಳ್ಳುವಲ್ಲಿ ಪಾಲಿಸಬೇಕಾದ ಕ್ರಮಗಳನ್ನು ತಿಳಿಸುತ್ತಾರೆ. ಕೊನೆಯ ಅಧ್ಯಾಯದಲ್ಲಿ ಈ ನಿಟ್ಟಿನಲ್ಲಿ ರೈತರು ಕೈಗೊಳ್ಳಬೇಕಾದ ಪ್ರಯೋಗ ಮತ್ತು ಅಲ್ಲಿ ಗಮನಿಸಬೇಕಾದ ಅಂಶಗಳ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ.

ಸಿದ್ಧಾಂತ ಮತ್ತು ಪ್ರಯೋಗಗಳೆರಡನ್ನೂ ಆಳ ಜ್ಞಾನದ ತಳಹದಿಯ ಮೇಲೆ ಅಚ್ಚುಕಟ್ಟಾಗಿ ಬೆಸೆದಿರುವುದು ಈ ಕೃತಿಯ ವೈಶಿಷ್ಟ್ಯವಾಗಿದೆ. ಪ್ರತಿಕೂಲ ಸನ್ನಿವೇಶದಲ್ಲಿ ಅತೀ ಸಮಸ್ಯಾತ್ಮಕ ಮಣ್ಣುಗಳ ಜತೆ ಕೆಲಸ ಮಾಡುವ ಬರ್ನಾಡ್, ನಾಗರಿಕತೆಯ ಅರಿವಿಗೆ ಎಚ್ಚರವಾಗಿದ್ದು ಅದೇ ಸಮಯದಲ್ಲಿ ಒಬ್ಬ ರೈತನ ದಿನನಿತ್ಯದ ಜಂಜಾಟಕ್ಕೆ ಎದುರಾಗುವ ಪರಿ ಅವರಿಗೊಂದು ಅನನ್ಯತೆಯನ್ನು ತಂದುಕೊಡುತ್ತದೆ. ರೈತರ ಒಳಿತು ಮತ್ತು ಭೂಮಿಯ ಶುಶೂಷೆಗೆ ಈ ಪುಸ್ತಕ ಮತ್ತೊಂದು ಕೊಡುಗೆಯಾಗಬಲ್ಲುದೆಂದು ಆಶಿಸುತ್ತೇವೆ.

Reviews

There are no reviews yet.

Be the first to review “ಸಾವಯವ ಬೇಸಾಯದ ರೀತಿ ರಿವಾಜು”

Your email address will not be published. Required fields are marked *