15%

ಬಂಧ ಮುಕ್ತ

ಇಂಗ್ಲಿಷ್ ಮೂಲ : ಬೆಲ್ ಹುಕ್ಸ್

ಕನ್ನಡ ನಿರೂಪಣೆ : ಶ್ರೀಮತಿ ಎಚ್ ಎಸ್

ಪ್ರಕಾಶನ : ಜೀರುಂಡೆ ಪುಸ್ತಕ

272.00 320.00

In stock

Add to wishlist Adding to wishlist Added to wishlist

ಬಂಧ ಮುಕ್ತ | Bandha Mukta

Written by Bell Hooks

Kannada Translation by Srimathi HS

Published by Jirunde Pustaka

ಬೆನ್ನುಡಿ

ನಾವು ನಮ್ಮ ಮತ್ತು ನಮ್ಮ ಕಪ್ಪು ಸಮುದಾಯಗಳ ಆತ್ಮಗಳನ್ನು, ಕಾಪಾಡಿಕೊಳ್ಳಬೇಕಿದೆ. ಈ ವಿಮೋಚನೆಗೆ ಮಾರ್ಗದರ್ಶನ ನೀಡಬಲ್ಲ ಕಪ್ಪು ನಾಯಕತ್ವದ ಕೊರತೆ ನಮಗಿದೆ ಎಂಬ ಒಂದು ಸಿನಿಕ ಅಭಿಪ್ರಾಯವು ನಮ್ಮ ತಲೆಯಲ್ಲಿ ದಟ್ಟವಾಗಿ ಕುಳಿತುಬಿಟ್ಟಿದೆ. ಆದರೆ, ಇದೇನೂ ನಿಜವಲ್ಲ. ನಮ್ಮ ಸಮಾಜದಲ್ಲಿ, ದಾರ್ಶನಿಕ ಕಪ್ಪು ನಾಯಕತ್ವದವರು ಬೇಕಾದಷ್ಟು ಇದ್ದಾರೆ; ಅದರಲ್ಲಿ ಅನೇಕರು ಮಹಿಳೆಯರು. ಆದರೆ, ನಮ್ಮನ್ನು ಪಿತೃಪ್ರಧಾನತೆಯ ಚಿಂತನೆಗಳು ಆವರಿಸಿಕೊಂಡಿವೆ; ಇವು ಹೆಣ್ಣು ವಿವೇಕ ಮತ್ತು ಅದು ಹೇಳುವ ಮಾತುಗಳನ್ನು ಗುರುತಿಸಲು ನಮ್ಮನ್ನು ಬಿಡುವುದಿಲ್ಲ. ನಮ್ಮ ಕಪ್ಪು ಸಮುದಾಯಗಳ ಆಳವಾದ ಗಾಯಗಳು ಮಾಯಬೇಕೆಂದರೆ, ನಾವು ಮತ್ತೆ ಪ್ರೀತಿಯ ದಾರಿಗೆ ಮರಳಲೇಬೇಕು. ಇದಕ್ಕೆ ಮಾತ್ರವೇ, ಬಿಳಿಯ ಶ್ರೇಷ್ಠತೆಯನ್ನೂ ಒಳಗೊಂಡಂತೆ, ಎಲ್ಲ ಬಗೆಯ ದಬ್ಬಾಳಿಕೆಗಳಿಗೆ, ಮತ್ತು ಲೈಂಗಿಕತಾವಾದಕ್ಕೆ ವಿರುದ್ಧವಾಗಿ ನಿಲ್ಲುವ ಶಕ್ತಿ ಇರುವುದು. ಸಮಕಾಲೀನ ಕಪ್ಪು ಮಹಿಳಾ ನಾಯಕತ್ವಕ್ಕೆ, ಆತ್ಮಗಳನ್ನು ಕಾಪಾಡಿಕೊಳ್ಳುವ ಈ ಕುರಿತು ಸ್ಪಷ್ಟ ಅರಿವು ಇದೆ. ಈ ದಾರಿಯನ್ನು ಕಂಡುಕೊಳ್ಳಲು, ಮತ್ತು ಅದರಲ್ಲಿ ನಡೆಯಲು ನೆರವಾಗುವ ಅದ್ಭುತ ನೀಲನಕ್ಷೆಯನ್ನು ಕೂಡಾ ನಮ್ಮ ಈ ಕಪ್ಪು ದಾರ್ಶನಿಕ ಮುಂದಾಳುಗಳು ತಯಾರಿಸಿ, ನಮ್ಮೆದುರೇ ಇಟ್ಟಿದ್ದಾರೆ. ನಮ್ಮ ಗಾಯಗಳನ್ನು ಮಾಯಿಸಿ, ನಮ್ಮನ್ನು ಬಂಧಮುಕ್ತವಾಗಿಸುವ ದಾರಿಯಂತೂ ಸ್ಪಷ್ಟವಾಗಿದೆ. ಕಪ್ಪು ಜನರು ಬರಬೇಕು ಅಷ್ಟೇ

Reviews

There are no reviews yet.

Be the first to review “ಬಂಧ ಮುಕ್ತ”

Your email address will not be published. Required fields are marked *

You may also like…