14%

ಜಾತಿ ಮತ್ತು ಲಿಂಗತ್ವ

ಮೂಲ : ಶರ್ಮಿಳಾ ರೆಗೆ
ಕನ್ನಡಕ್ಕೆ : ದು. ಸರಸ್ವತಿ
ಪ್ರಕಾಶನ : ಕೌದಿ ಪ್ರಕಾಶನ

600.00 700.00

In stock

Add to wishlist Adding to wishlist Added to wishlist
ಜಾತಿ ಮತ್ತು ಲಿಂಗತ್ವ | Jathi Mattu Lingathva

Written by Sharmila Rege

Translated to Kannada by Du Saraswati
Published by Kaudi Prakashana
…ಮಹಿಳಾ ಚಳುವಳಿಯಲ್ಲಿ ಗಂಭೀರವಾಗಿ ತೊಡಗಿಕೊಂಡಿದ್ದ ಹಲವರ ಒಡನಾಟ ನನ್ನ ಚಿಂತನೆಗೆ ಮತ್ತಷ್ಟು ಸಾಮಗ್ರಿಗಳನ್ನು ಒದಗಿಸಿದ್ದವು. ಈ ಹೊತ್ತಿನಲ್ಲಿ ನನ್ನ ಮನಸ್ಸಿನಲ್ಲಿ ಹಲವು ಗೊಂದಲಗಳು, ಪ್ರಶ್ನೆಗಳು, ಅನುಮಾನಗಳು ಇದ್ದವು. ಮುಖ್ಯವಾಹಿನಿಯ ಮಹಿಳಾ ಚಳುವಳಿಯಲ್ಲಿ ಮತ್ತೇನೇನೋ ಸೇರಬೇಕು ಅಂತ ಅನ್ನಿಸಿತ್ತು. ದಲಿತ ಚಳುವಳಿಯಲ್ಲಿ ಮಹಿಳಾ ಪ್ರಶ್ನೆಯನ್ನು ನೋಡುವ ಕ್ರಮವೂ ಆ ಕಾಲಘಟ್ಟದಲ್ಲಿ ಒಂದಿಷ್ಟು ಇರುಸು ಮುರುಸು ಉಂಟುಮಾಡಿತ್ತು. ದಲಿತ, ಮಹಿಳಾ ಮತ್ತು ರೈತ ಚಳುವಳಿಗಳ ತತ್ತ್ವ ಮತ್ತು ಆಚರಣೆಗಳಿಗೂ ಮತ್ತು ನಾನು ಕ್ಷೇತ್ರ ಸಮೀಕ್ಷೆಗಳಲ್ಲಿ ಎದುರಾಗುತ್ತಿದ್ದ ವಾಸ್ತವಗಳಿಗೂ ಹೆಚ್ಚಿನ ಬಾರಿ ತಾಳೆಯಾಗುತ್ತಿರಲಿಲ್ಲ. ಎಲ್ಲವೂ ಗೊಂದಲದ ಗೂಡಾಗಿತ್ತು. ಅಂತಹ ಹೊತ್ತಿನಲ್ಲಿ ಇಕನಾಮಿಕ್ ಮತ್ತು ಪೊಲಿಟಿಕಲ್ ವೀಕ್‌ಯ ಅನುಗಾಲದ ಓದುಗಳಾಗಿದ್ದ ನನ್ನ ಅರಿವಿನ ಪರಿಧಿಯೊಳಗೆ ತಮ್ಮ ‘ದಲಿತ್ ವಿಮೆನ್ ಟಾಕ್ ಡಿಫೆರೆಂಟಲೀ, ಎ ಕ್ರಿಟೀಕ್ ಆಫ್ ಡಿಫೆರೆನ್ಸ್, ಆಂಡ್ ಟುವರ್ಡ್ಸ್ ಎ ದಲಿತ್ ಫೆಮಿನಿಸ್ಟ್ ಸ್ಟಾಂಡ್ ಪಾಯಿಂಟ್ ಪೊಸಿಷನ್’ ಎನ್ನುವ ಲೇಖನದ ಮೂಲಕ ಶರ್ಮಿಳಾ ರೆಗೆ ಬಂದರು. ಅವರ ಲೇಖನ ಮೇಲಿನ ಮೂರು ಚಳುವಳಿಯೊಳಗೆ ಸಂವೇದನಾಶೀಲರು ಚಳುವಳಿಯನ್ನು ಮಾತ್ರವಲ್ಲ ಸ್ವತಃ ತಮ್ಮನ್ನೇ ತಾವು ವಿಮರ್ಶಾತ್ಮಕವಾಗಿ ನೋಡಿಕೊಳ್ಳುವಂತೆ ಮಾಡಿತು. ಅದು ಎಲ್ಲರನ್ನೂ ಒಮ್ಮೆ ಅಲುಗಾಡಿಸಿ ಬೆಚ್ಚಿ ಬೀಳಿಸಿತು. ಆದಾದ ಕೆಲವೇ ವರ್ಷಗಳಲ್ಲಿ ಹೊರ ಬಂದ ರೈಟಿಂಗ್ ಕಾಸ್ಟ್ ರೈಟಿಂಗ್ ಜೆಂಡರ್ ವಿಭಿನ್ನ ಚಳುವಳಿಗಳಲ್ಲಿ ಸಕ್ರಿಯವಾಗಿರುವವರು ತಮ್ಮ ಆತ್ಮಸಾಕ್ಷಿಯನ್ನೇ ಪ್ರಶ್ನಿಸಿಕೊಳ್ಳುವಂತೆ ಮಾಡಿತು. ನಮ್ಮ ಪ್ರಜಾಪ್ರಭುತ್ವ ಎಲ್ಲಿ ಎಡವಿದೆ ಎನ್ನುವುದನ್ನು ಸ್ಪಷ್ಟವಾಗಿ ತೋರಿಸಿತು.
ರೆಗೆ ಅವರ ಪುಸ್ತಕವು ಕನ್ನಡಕ್ಕೆ ಬರುತ್ತಿರುವುದು ಕನ್ನಡ ಸಾರಸ್ವತ ಲೋಕ, ಮಹಿಳಾ ಅಧ್ಯಯನ ಮತ್ತು ದಲಿತ ಅಧ್ಯಯನಕ್ಕೆ ಒಂದು ಮಹತ್ತರವಾದ ಕೊಡುಗೆ ಕನ್ನಡದ ಮಹಿಳಾ ಮತ್ತು ದಲಿತ ಅಧ್ಯಯನಕ್ಕೆ ದಿಕ್ಕೂಚಿಯಾಗಬಲ್ಲ ತಾತ್ವಿಕ ಒಳನೋಟಗಳಿರುವಂತಹ ಕೃತಿ ಇದು. ಇಂತಹ ಗಹನವಾದ ಪುಸ್ತಕವನ್ನು ಎಲ್ಲರನ್ನೂ ಮುಟ್ಟಬಲ್ಲ ಕನ್ನಡದಲ್ಲಿ ಅನುವಾದಿಸಿರುವುದು ಸರಸ್ವತಿಯವರ ಸಾಮರ್ಥ್ಯ ಹಾಗೂ ವಿಷಯವನ್ನು ಕುರಿತು ಇರುವ ಆಳವಾದ ಗ್ರಹಿಕೆಗೆ ಸಾಕ್ಷಿ.
– ಶೈಲಜಾ ವೇಣುಗೋಪಾಲ್
ಬೆನ್ನುಡಿಯಿಂದ…

Reviews

There are no reviews yet.

Be the first to review “ಜಾತಿ ಮತ್ತು ಲಿಂಗತ್ವ”

Your email address will not be published. Required fields are marked *

You may also like…