ಎಲ್ಲೆಗಳ ದಾಟಿದವಳು | Ellegala Dattidavalu
Written by Shruthi BR
Published by Jirunde Pustaka
ಶ್ರುತಿ ಬಿ ಆರ್ ಅವರ ಕತೆಗಳ ಸಾಧನೆಯೆಂದರೆ ತನ್ನ ಸೀಮಿತ ಅನುಭವಲೋಕದ ಚೌಕಟ್ಟಿನ ಳಗೆ ಅವು ಸೂಕ್ಷ್ಮತೆ, ಜೀವಪರವಾದ ಅಶಯಗಳನ್ನು ಅಭಿವ್ಯಕ್ತಿಸುತ್ತವೆ. ಶ್ರುತಿಯವರ ಕತೆಗಳು ಮಿತವ್ಯಯದ ಕಲೆಗಾರಿಕೆಯನ್ನು ಹೆಚ್ಚಾಗಿ ನೆಚ್ಚಿಕೊಳ್ಳುತ್ತವೆ. ಗಾತ್ರ ಹಾಗೂ ವಿಸ್ತಾರದಲ್ಲಿ ಎಲ್ಲಾ ಕತೆಗಳು ಸಣ್ಣ ಕತೆಗಳಾಗಿರುವುದಕ್ಕೆ ಇದೇ ಕಾರಣವಾಗಿರಬಹುದು. ‘ಎಲ್ಲೆಗಳ ದಾಟಿದವಳು’ ಯಶಸ್ವಿಯಾದ ಕತೆಯಾಗಿದೆ. ಮೆಲೋಡ್ರಾಮೇಟಿಕ್ ಆಗುವ ಅಪಾಯವಿರುವ ಕತೆಯ ವಸ್ತುವು ಶ್ರುತಿಯವರ ಮೆಲುದನಿಯ ಶೈಲಿಯಿಂದಾಗಿ ಶಕ್ತಿಶಾಲಿಯಾಗಿ ಕತೆಯಲ್ಲಿ ಹೊರಹೊಮ್ಮುತ್ತದೆ.
ಒಟ್ಟಾರೆ ಇಲ್ಲಿಯ ಕತೆಗಳು ಕತೆಗಾರ್ತಿಯ ಸಾಧ್ಯತೆಗಳನ್ನು ಸಮರ್ಥವಾಗಿ ತೋರಿಸುತ್ತವೆ. ಹಾಗೆಯೇ ಸೀಮಿತತೆಯನ್ನು ಕೂಡ. ನಿರ್ಭಿಡೆಯಾಗಿ ಅನುಭವದ ಅಳಕ್ಕಿಳಿದು ಬರೆದರೆ ಶ್ರುತಿ ಒಬ್ಬ ಸಮರ್ಥ ಕತೆಗಾರ್ತಿಯಾಗಬಲ್ಲರು ಎನ್ನುವುದರ ಬಗ್ಗೆಯೂ ನನಗೆ ಸಂಶಯವಿಲ್ಲ.
– ಡಾ. ರಾಜೇಂದ್ರ ಚೆನ್ನಿ
Reviews
There are no reviews yet.