ಅಡಿಕೆ ಕೃಷಿ ಇಂದು ಇಡೀ ದಕ್ಷಿಣ ಭಾರತದಾದ್ಯಂತ ಅತಿ ವ್ಯಾಪಕವಾಗಿ ಹಬ್ಬುತ್ತಿದೆ. ಕಾರಣ ಸದ್ಯಕ್ಕೆ ಅದಕ್ಕೆ ಸಿಕ್ಕುತ್ತಿರುವ ಉತ್ತಮ ಬೆಲೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಅದು ಹಬ್ಬುತ್ತಿರುವ ವೇಗ ಮತ್ತು ಆವರಿಸುತ್ತಿರುವ ವಿಸ್ತೀರ್ಣ ಗಮನಿಸಿದರೆ ಅದಕ್ಕೆ ಈಗ ದೊರೆಯುತ್ತಿರುವ ಬೆಲೆ ಮುಂದೆಯೂ ದೊರೆಯುತ್ತೆ ಅನ್ನುವುದು ಅನುಮಾನವೇ ಸರಿ. ಏಕೆಂದರೆ ಅದೊಂದು ಬಹುಪಾಲು ಅಗಿದು ಉಗಿಯಲು ಬಳಕೆಯಾಗುವ ಬೆಳೆ.
ಜೊತೆಗೆ ಬಹುಪಾಲು ಎಲ್ಲೆಡೆ ಅಡಿಕೆಯನ್ನು ಏಕ ಬೆಳೆಯಾಗಿ ಬೆಳೆಯಲಾಗುತ್ತಿದೆ. ಬೆಲೆ ಕುಸಿತದ ಸಂದರ್ಭದಲ್ಲಿ ನೆರವಾಗಲು ಇಲ್ಲಿ ಮಿಶ್ರ ಬೆಳೆಗಳು ಇರುವುದು ಸೂಕ್ತ. ಇದರಿಂದಾಗಿ ರೋಗ ಕೀಟಗಳೂ ನಿಯಂತ್ರಣದಲ್ಲಿ ಇರುವುದರ ಜೊತೆಗೆ ಎಕರೆವಾರು ಆದಾಯವೂ ದುಪ್ಪಟ್ಟಾಗುತ್ತದೆ. ಅಲ್ಲದೆ ಕಡಿಮೆ ವಿಸ್ತೀರ್ಣದ ಭೂಮಿ ಉಳ್ಳವರಿಗೂ ಮಿಶ್ರ ಬೆಳೆಗಳು ಕೃಷಿ ಲಾಭದಾಯಕ ಆಗಲು ನೆರವಾಗುತ್ತವೆ. ಏಕೆಂದರೆ ನಮ್ಮಲ್ಲೀಗ 86% ರೈತರು ಸಣ್ಣ ಹಿಡುವಳಿ ಇರುವವರು ಅಂದರೆ ಒಂದು ಹೆಕ್ಟೇರ್ ಒಳಗೆ ಕೃಷಿ ಭೂಮಿ ಉಳ್ಳವರು.
ಅಲ್ಲದೆ ಇಂದು ಅಡಿಕೆ ಕೃಷಿಗೆ ಬರುತ್ತಿರುವ ಜನರಲ್ಲಿ ಬಹಳ ಮಂದಿ ಯಾವುದೇ ಬಗೆಯ ಕೃಷಿ ಹಿನ್ನೆಲೆ ಉಳ್ಳದವರೂ ಇದ್ದು ಅವರು ಈ ಕೃಷಿಯಲ್ಲಿ ಅನೇಕ ಬಗೆಯ ತಪ್ಪುಗಳನ್ನು ಮಾಡುತ್ತಿದ್ದಾರೆ. ಈ ಪುಸ್ತಕ ಅಂತವರಿಗೆ ಖಂಡಿತ ನೆರವಾಗುತ್ತದೆ.
ಈ ಪುಸ್ತಕದಲ್ಲಿರುವ ಎಲ್ಲ ವಿಷಯಗಳೂ ನನ್ನ ನಾಲ್ಕುವರೆ ದಶಕಗಳ ತೋಟಗಾರಿಕೆ ಕೃಷಿ ಅನುಭವಗಳ ಹಿನ್ನೆಲೆಯಿಂದ ಮೂಡಿದ , ಏಳು ಬೀಳುಗಳನ್ನು ತಿದ್ದಿಕೊಂಡು ಯಶಸ್ಸಿನ ದಾರಿ ಕಂಡುಕೊಂಡ ಅನುಭವ ಜನ್ಯ ಬರಹಗಳು.
ಇದು ಕೃಷಿ ಕುರಿತ ನನ್ನ ಐದನೇ ಪುಸ್ತಕ. ಈ ಪುಸ್ತಕದಲ್ಲಿ ಅಡಿಕೆಯ ಸುಸ್ಥಿರ ಕೃಷಿಗೆ ಸಂಬಂದಿಸಿದ ಬಹುಪಾಲು ಎಲ್ಲ ಸಂಗತಿಗಳನ್ನು ಚರ್ಚಿಸಲಾಗಿದೆ.ಅದಕ್ಕೆ ಸಂಬಂಧಿಸಿದ ಚಿತ್ರಗಳೂ ಇಲ್ಲಿವೆ.
 “ಅಡಿಕೆಯ ಕೃಷಿ ಲೋಕ “. ಪರಿವಿಡಿ ಹೀಗಿದೆ..
೧ ಬಯಲು ಸೀಮೆಯಲ್ಲಿ ಅಡ್ಕೆಯ ಸಹಜ ಕೃಷಿ
೨ ಅಡಿಕೆ ಕೃಷಿಗೆ ಮಣ್ಣಿನ ಆಯ್ಕೆ.
೩ ಭೂಮಿ ಸಿದ್ಧತೆ
೪ ತಳಿ ಆಯ್ಕೆ
೫ ತೋಟದ ವಿನ್ಯಾಸ
೬ ಸಸಿ ನಾಟಿ ವಿಧಾನಗಳು
೭ ನೀರಾವರಿ ವಿಧಾನಗಳು
೮ ಸಸಿ ತೋಟದ ನಿರ್ವಹಣೆ~ ಬಾಳೆ ಮಿಶ್ರ ಬೆಲೆಯಾಗಿ ಏಕೆ.
೯ ತೆಂಗಿನಲ್ಲಿ ಅಡಿಕೆ ಮಿಶ್ರ ಬೆಳೆ~ ಎಲ್ಲೆಯಲ್ಲಿ ಟಿಂಬರ್ ಮರಗಳು~ ಜೀವವಿಮೆ.
೧೦ ರಸ ನೀರಾವರಿ ವಿಧಾನಗಳು
೧೧ ರೋಗ ಕೀಟ ಬಾಧೆ~ ಸಾವಯವ , ಜೈವಿಕ ಪರಿಹಾರಗಳು ~ ಜೈವಿಕ ಗೊಬ್ಬರಗಳು ~ ಸಾರಯುಕ್ತ ಸಾವಯವ ಗೊಬ್ಬರ ತಯಾರಿಕೆ
೧೨ ಅಡಿಕೆ ಸಂಸ್ಕರಣೆ
೧೪ ಅಡಿಕೆ ಮಿಶ್ರ ಬೆಳೆಗಳು
೧೫ ಪ್ರಶ್ನೋತ್ತರಗಳು, ಬಸಿಕಾಲುವೆ …
೧೬ ಮಳೆನೀರು ಕೊಯ್ಲು , ಕಡ್ಮೆ ಖರ್ಚಿನ ಬೋರು ಮರುಪೂರಣ ವಿಧಾನ.
೧೪ ಚಿತ್ರ ಸಂಪುಟ.
ಶಿವನಂಜಯ್ಯ ಬಾಳೆಕಾಯಿ ಅವರ ಬಯಲು ಸೀಮೆ ಅಡಿಕೆ ಕೃಷಿ ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

Close
Sign in
Close
Cart (0)

No products in the cart. No products in the cart.





0