ಅಂಕೆಗಳಿರುವ ನಿಗೂಢ ಪೂಜೆಯ ವಸ್ತು ಇನ್ನೇನಲ್ಲ. ಅದೊಂದು ಗಣಿತ ಚಮತ್ಕಾರ. – ವಿ.ಎಸ್‌.ಎಸ್‌. ಶಾಸ್ತ್ರಿ

ಮುಂಜಾನೆ  ಅಂಗಡಿ ತೆರೆದು  ವ್ಯವಹಾರ ನಡೆಸುವ ಮುನ್ನ ಸಣ್ಣದೊಂದು ದೇವರ  ಪಟಕ್ಕೆ ಕೈ ಮುಗಿಯುವುದು ಭಾರತದಲ್ಲಿ ವಾಡಿಕೆ. ಹಿತ್ತಾಳೆ ಅಥವಾ ತಾಮ್ರದಲ್ಲಿ ಮಾಡಿದ ಸಣ್ಣ ಹಾಳೆಯಲ್ಲಿ ಮಾಯಾ ಚೌಕದ ಪಟ ಅದು. ಸಾಧಾರಣವಾಗಿ ಈ ಮಾಯಾಚೌಕವನ್ನು ಕುಬೇರ ಯಂತ್ರ  ಲಕ್ಷ್ಮಿಯಂತ್ರ ಮುಂತಾಗಿ ಕರೆಯುತ್ತಾರೆ.. ಅಡ್ಡಸಾಲು ಕಂಭ ಸಾಲುಗಳಲ್ಲಿ, 3×3 ಚೌಕಗಳಲ್ಲಿ ಅಂಕಿಗಳನ್ನು ತುಂಬಿಸಿರುವ ಪಟ ಇದು. ಗಣಿತಜ್ಞರಿಗೂ ಆಸಕ್ತಕರ ಪಟ. ಏಕೆಂದರೆ ಇಂತಹ ಪಟಗಳಲ್ಲಿರುವ ಸಂಖ್ಯೆಗಳನ್ನು ಉದ್ದುದ್ದಕ್ಕೆ, ಅಡ್ಡಡ್ಡಕ್ಕೆ ಇಲ್ಲವೇ ಮೂಲೆಯಿಂದ ಮೂಲೆಗೆ ಹೇಗೆ ಕೂಡಿದರೂ ಒಂದೇ ಮೊತ್ತಬರುತ್ತದೆ . 

ಮಾಯಾಚೌಕಗಳು ಭಾರತೀಯವಷ್ಟೆ ಅಲ್ಲ, ವಿವಿಧ ಸಂಸ್ಕೃತಿಗಳ ಜನಪದಕ್ಕೆ ಸೇರಿವ ಗಣಿತ ಕೌತುಕಗಳು.. ಅವುಗಳ ಗಣಿತಾಂಶಗಳನ್ನು ಅರಿಯದೆಯೇ ಅವುಗಳಿಗೆ ಮಂತ್ರ ಶಕ್ತಿಯಿದೆಯೆಂದು ನಂಬಿ ಜನರು ಬಳಸುತ್ತಿದ್ದಾರೆ. ವಿಶೇಷ ಎಂದರೆ ಮಾಯಾಚೌಕಗಳ ರಚನೆಗೆ ಗಣಿತದ ಅರಿವು ಇರಬೇಕು. ಆ ಮಟ್ಟದ ಗಣಿತವು ನಮ್ಮ ದೇಶದಲ್ಲಿ ಬಳಕೆಯಲ್ಲಿತ್ತು ಎಂಬುದಕ್ಕೆ ಮಾಯಾಚೌಕಗಳು ಜಾನಪದ ಪುರಾವೆಗಳಾಗಿವೆ.  ಇಲ್ಲಿದೆ.

ಈ ಜಾನಪದ ಗಣಿತ ಕೌತುಕವನ್ನು ರಚಿಸುವುದು ಹೇಗೆ? ಇಲ್ಲೊಂದು ಉದಾಹರಣೆ ಇದೆ. ಇಲ್ಲಿನ 3×3  ಮಾಯಾ ಚೌಕವನ್ನು ರಚಿಸುವುದು ಹೇಗೆಂದು ನೋಡೋಣ 

ಹಂತ 1  .ಮೊದಲು ಯಾವುದಾದರೂ ಕ್ರಮಾಗತ ಸಂಖ್ಯೆಗಳನ್ನು  3 ಕಂಬಸಾಲು ಮತ್ತು 3 ಅಡ್ಡಸಾಲುಗಳಲ್ಲಿ ಬರೆಯಿರಿ. 

ಹಂತ 2   ಮೂಲೆಯಲ್ಲಿನ ಸಂಖ್ಯೆಗಳು  ಬೇರ್ಪ್ಡುಡುವಂತೆ ಒಂದು ವರ್ಗ ಎಳೆಯಿರಿ. 

ಈ ವರ್ಗದಲ್ಲಿ ಎರಡು ಅಡ್ಡ ಗೆರೆ ಮತ್ತು ಎರಡು ಉದ್ದ ಗೆರೆ ಎಳೆದು 3×3  ಚೌಕ ಮಾಡಿ.. ಈಗ ಕೇಂದ್ರದಲ್ಲಿ ರಚಿಸಿದ ಚೌಕದಲ್ಲಿ ಕೆಲವು ಮನೆಗಳು ಖಾಲಿ ಇವೆ. ಈ ಮನೆಗಳ ಹೊರಗೆ ಅಂಕಿಗಳಿವೆ ಮಧ್ಯದಲ್ಲಿ 9 ಅಂಕಿ ಇದೆ. 

ಹಂತ 3. ಹೊರಗಿನ ಅಂಕಿಯನ್ನು ಮಧ್ಯದ 5 ಅನ್ನು ದಾಟಿಸಿ ಖಾಲಿ ಇರುವ ಮನೆಯಲ್ಲಿ ಹಾಕಿ.

ಹಂತ 4. ಇದೆ ಬಗೆಯಲ್ಲಿ ಉಳಿದ 3 ಅಂಕಿಗಳನ್ನು ಬರೆಯಿರಿ.

ಈ 3×3  ಮಾಯಾಚೌಕಕ್ಕೆ  ಚೀನಾ ದೇಶದ  ಒಂದು ರೋಚಕ ಕಥೆ ಇದೆ. ಚಕ್ರವರ್ತಿ ಯೂ ನದಿಯ ತಟದಲ್ಲಿ ಪ್ರವಾಸ ಮಾಡುತ್ತಿದ್ದನಂತೆ.

ಅಲ್ಲಿದ್ದ ಬೆಸ್ತರು ಒಂದು ಆಮೆಯನ್ನು ತಂದು ಕೊಟ್ಟರಂತೆ.. ಅದರ ಮೇಲೆ ಅಲ್ಲಲ್ಲಿ  ಬುಗುಟುಗಳಿದ್ದವು. ಇದರ ಅರ್ಥವೇನೆಂದು ಚಕ್ರವರ್ತಿ ಆಸ್ಥಾನದ ಪಂಡಿತರನ್ನು ಕೇಳಿದನಂತೆ. ಅವರು ಆ ಬುಗುಟುಗಳನ್ನು ಎಣಿಸಿದರು. ಅದು 3×3  ಮಾಯಾ ಚೌಕವಾಗಿತ್ತು  ಲೋ ಶೂ ಎಂಬ ಇದು ಜಗತ್ತಿನ ಮೊದಲ ಮಾಯಾಚೌಕವೆಂದು ಹೆಸರು ಪಡೆದಿದೆ.  ಇತ್ತೀಚಿಗೆ ಫೆಂಗ್ ಶ್ವೇ (Feng Shui) ಆರಾಧನೆ ಎಲ್ಲೆಡೆ ನಡೆದಿರುವುದನ್ನು ಕೇಳಿರುತ್ತೀರಿ. ಅದು ಕೂಡ ಮಾಯಾಚೌಕದ ಒಂದು ರೂಪವೇ.  ಹಲವಾರು ಹೊಟೇಲುಗಳಲ್ಲಿ ಗಲ್ಲಾ ಪೆಟ್ಟಿಗೆಯ ಬಳಿ ಇಂತಹ ಆಮೆಯ ಚಿಕ್ಕ ಮೂರ್ತಿ ಇಟ್ಟಿರುತ್ತಾರೆ.

 ಮಾಯಾಚೌಕವು ಜಗತ್ತಿನ ಹಲವು ಸಂಸ್ಕೃತಿಗಳಲ್ಲಿ ಹರಡಿದೆ. ನಮ್ಮದೇಶದಲ್ಲೂ ಇದರ ವ್ಯಾಪಕ

ಬಳಕೆಯಿದೆ.  ತಮಿಳು ನಾಡಿನ ಸುಪ್ರಸಿದ್ಧ ಪಳನಿಯ ಸುಬ್ರಹ್ಮಣ್ಯನ ದೇವಾಲಯದಲ್ಲಿ ಇದನ್ನು ಕಂಭದ ಮೇಲೆ ಕೆತ್ತಿದ್ದಾರೆ . ಇದನ್ನೇ ವಾಸ್ತುದೋಷ ನಿವಾರಣೆಗೆ ಎಂದು ಮನೆಯ ಮೆಟ್ಟಿಲ ಮೇಲೆ, ಹೊಸ್ತಿಲಲ್ಲಿ ಹಚ್ಚಿರುವುದನ್ನು ನೋಡಬಹುದು. 

ಈ ಮೂಲ ಮಾಯಾಚೌಕಕ್ಕೆ ಯಾವುದಾದರೊಂದು ಸಂಖ್ಯೆಯನ್ನು ಕೂಡಿ ಇನ್ನೊಂದು ಮಾಯಾಚೌಕ ಮಾಡಿ ಅದನ್ನು ಬೇರೊಂದು ಹೆಸರಿನಿಂದ

ಈ ಮೂಲ ಮಾಯಾಚೌಕಕ್ಕೆ ಯಾವುದಾದರೊಂದು ಸಂಖ್ಯೆಯನ್ನು ಕೂಡಿ ಇನ್ನೊಂದು ಮಾಯಾಚೌಕ ಮಾಡಿ ಅದನ್ನು ಬೇರೊಂದು ಹೆಸರಿನಿಂದ ಕರೆದದ್ದೂ ಉಂಟು.  ಕುಬೇರ ಯಂತ್ರ ಈ ಬಗೆಯದು. ಲೋ ಶೂ ಮಾಯಾ ಚೌಕಕ್ಕೆ 19 ಅನ್ನು ಕೂಡಿ ಇದನ್ನು ಪಡೆಯಲಾಗಿದೆ.

ಲೋ ಶೂ   ಮಾಯಾ ಚೌಕ ವನ್ನು ಕೇಂದ್ರದಲ್ಲಿರಿಸಿ ಅದಕ್ಕೆ ಕ್ರಮವಾಗಿ, ಅಂಕಿಗಳನ್ನು ಕೂಡಿ ಪಡೆದ    ಮಾಯಾ ಚೌಕಗಳು ನವಗ್ರಹ ಮಾಯಾ ಚೌಕಗಳೆಂದು ಹೆಸರು ಪಡೆದಿವೆ.

  • ವಿ.ಎಸ್‌.ಎಸ್‌. ಶಾಸ್ತ್ರಿ

ಶ್ರೀ. ವಿ. ಶಿವಶಂಕರ ಶಾಸ್ತ್ರಿಯವರು ನಿವೃತ್ತ ಬ್ಯಾಂಕ್‌ ಅಧಿಕಾರಿ. ಪ್ರವೃತ್ತಿಯಿಂದ ಹವ್ಯಾಸಿ ಗಣಿತ ಸಂವಹನ ಹಾಗೂ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

ಈ ಲೇಖನವು ಮೇ ತಿಂಗಳ ಕುತೂಹಲಿ ಕನ್ನಡ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಪೂರ್ಣ ಸಂಚಿಕೆಯನ್ನು ಕೆಳಗಿನ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಂಡು ಓದಬಹುದು.

ಮೇ ತಿಂಗಳ ಸಂಚಿಕೆಗೆ ಇಲ್ಲಿ ಕ್ಲಿಕ್ ಮಾಡಿ

ಹೊಸ ಚಂದಾದಾರರಾಗಲು  ಈ ಫಾರಮನ್ನು ಭರ್ತಿ ಮಾಡಿ. ಮುಂದಿನ ಸಂಚಿಕೆ ನಿಮ್ಮನ್ನು ಈಮೇಲಿನಲ್ಲಿ ತಲುಪುವುದು. https://forms.gle/gnSbAybCHL9wu1k46.   ನಿಮ್ಮ ಗೆಳೆಯರನ್ನೂ ಚಂದಾದಾರರನ್ನಾಗಿಸಲು ಈ ಲಿಂಕನ್ನು ಶೇರ್‌ ಮಾಡಬಹುದು.

Leave a Reply

Close
Sign in
Close
Cart (0)

No products in the cart. No products in the cart.