10%

ಸುಸ್ಥಿರ ಕೃಷಿ ಪಾಠಗಳು

ಲೇಖಕರು : ಪ್ರಶಾಂತ್ ಜಯರಾಮ್
ಪ್ರಕಾಶನ : ಇನ್ಸ್ಟಿಟ್ಯೂಟ್ ಫಾರ್ ಕಲ್ಚರಲ್ ರಿಸರ್ಚ್ ಅಂಡ್ ಆಕ್ಷನ್ (ಇಕ್ರಾ )

117.00 130.00

In stock

Add to wishlist Adding to wishlist Added to wishlist

ಸುಸ್ಥಿರ ಕೃಷಿ ಪಾಠಗಳು | Susthira Krushi Paatagalu

Compiled by Prashanth Jayaram

Published by Institute for Cultural Research and Action (ICRA)

**

ನಾರಾಯಣ ರೆಡ್ಡಿಯವರನ್ನು ನಾನು ನನ್ನ ಗುರುಗಳಲ್ಲಿ ಒಬ್ಬರಾಗಿ ಸ್ವೀಕರಿಸಿದ್ದೇನೆ. ಅದಕ್ಕೆ ಹಲವು ಕಾರಣಗಳಿವೆ. ಸಾವಯವ ಕೃಷಿಯ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳುತ್ತಾ ವೃಥಾ ಗೊಂದಲ ಎಬ್ಬಿಸುತ್ತಿದ್ದ ಸಮಯದಲ್ಲಿ ನಾರಾಯಣ ರೆಡ್ಡಿ ಅತಿ ಸರಳವಾಗಿ ಮತ್ತು ಕ್ವಚಿತ್ತಾಗಿ ವಿಚಾರಗಳನ್ನು ತಿಳಿಸಿಕೊಡುತ್ತಿದ್ದರು. ನಾರಾಯಣ ರೆಡ್ಡಿಯವರಿಗೆ ವಿಶಾಲವಾಗಿ ಯೋಚಿಸುವುದು ಸಾಧ್ಯವಾಗುತ್ತಿತ್ತು. ತಮ್ಮ ಸಿದ್ಧಾಂತಕ್ಕೆ, ನಂಬಿಕೆಗೆ ಧಕ್ಕೆಯಾಗುವಂತಿದ್ದರೂ, ಎಲ್ಲಾ ರೈತರಿಗೂ ಅನುಕೂಲವಾಗುವ ದಿಕ್ಕಿನಲ್ಲೇ ಅವರು ನಡೆಯುತ್ತಿದ್ದರೇ ಹೊರತು ಯಾವುದನ್ನೂ ಧಿಕ್ಕರಿಸುತ್ತಿರಲಿಲ್ಲ. ಯಾರೇ ರೈತರು ಯಾವುದೇ ಉತ್ತಮ ಸಾವಯವ ವಿಧಾನವನ್ನು ಅನುಸರಿಸುತ್ತಿದ್ದರೂ ಅದನ್ನು ಉತ್ತೇಜಿಸುತ್ತಿದ್ದರು. ನಿಮಗೆ ಯಾವುದು ಹೊಂದಾಣಿಕೆಯಾಗುತ್ತದೋ ಅದನ್ನೇ ಮಾಡಿ ಎನ್ನುತ್ತಿದ್ದರೇ ಹೊರತು ತಮ್ಮದೇ ಸರಿ ಎನ್ನುವುದು ಅವರಲ್ಲಿ ಇರಲಿಲ್ಲ.

ಪರಂಪರಾಗತ ಕೃಷಿಯ ಮೇಲೆಯೇ ಸಾವಯವ ಕೃಷಿಯನ್ನು ಕಟ್ಟಿದವರು ನಾರಾಯಣ ರೆಡ್ಡಿ. ಜೊತೆಗೆ ಅವರು ತುಂಬಾ ಪುಸ್ತಕಗಳನ್ನು ಓದುತ್ತಿದ್ದರು. ಎಲ್ಲವನ್ನೂ ಮನನ ಮಾಡಿಕೊಂಡು, ಪ್ರಯೋಗ ಮಾಡಿ ಕಲಿಯುತ್ತಿದ್ದರು. ತಾವು ಹೊಸದಾಗಿ ಕಲಿತದ್ದನ್ನು ಪರಂಪರಾಗತ ಜ್ಞಾನದ ಒರೆಗಲ್ಲಿಗೆ ಹಚ್ಚಿ ನೋಡಿ ಎರಡನ್ನೂ ಹದವಾಗಿ ಬೆಸೆಯುತ್ತಿದ್ದರು.

ಸಾವಯವ ರಂಗದ ಯಾರ ಜೊತೆಗೂ ಅವರು ಭಿನ್ನಾಭಿಪ್ರಾಯ ಹೊಂದಿರಲಿಲ್ಲ. ಯಾರನ್ನೂ ಟೀಕಿಸುತ್ತಿರಲಿಲ್ಲ. ತನಗಿಂತ ಮುಂದೆ ಹೋಗಿ ಒಂದೇ ಒಂದು ಉತ್ತಮ ಪ್ರಯೋಗ ಮಾಡಿದವರನ್ನೂ ಗುರುವಿನಂತೆ ಕಾಣುತ್ತಿದ್ದ ಎತ್ತರದ ವ್ಯಕ್ತಿತ್ವ ಅವರದ್ದು ಕಣ್ಣು ಮುಚ್ಚಿ ತೆರೆಯುವುದರೊಳಗೆ ಸಾವಯವ ಕೃಷಿಗೆ ಬರಬಹುದು ಎಂದು ರೈತರನ್ನು ಉತ್ತೇಜಿಸುತ್ತಿದ್ದ ನಾರಾಯಣ ರೆಡ್ಡಿ, ತಮ್ಮ ಜೀವಿತದ ಕೊನೇವರೆಗೂ ಯಾರು, ಯಾವಾಗ ಎಲ್ಲಿಗೆ ಕರೆದರೂ ಸಿಕ್ಕಿದ ವಾಹನ ಹತ್ತಿಕೊಂಡು ತಕ್ಷಣ ಹೋಗಿ ತಮ್ಮಿಂದಾದ ರೀತಿಯಲ್ಲಿ ಅವರಿಗೆ ಸಹಾಯ ಮಾಡುತ್ತಿದ್ದರು.

ನಾರಾಯಣ ರೆಡ್ಡಿಯವರ ಸಂಪರ್ಕಕ್ಕೆ ಬಾರದೇ ಇದ್ದಿದ್ದರೆ ನಾನು ಒಬ್ಬ ಸರ್ವೆಸಾಮಾನ್ಯ ರೈತನಾಗಿರುತ್ತಿದ್ದೆ. ಇವತ್ತಿನ ಸುಂದರ್‌ರಾಮನ್ ಆಗಿರುತ್ತಿರಲಿಲ್ಲ. ಅಂತೆಯೇ ನನ್ನಂಥ ಅನೇಕಾನೇಕ ರೈತರು ಕೂಡ.

– ಎಸ್. ಆರ್. ಸುಂದರ್‌ರಾಮನ್

Reviews

There are no reviews yet.

Be the first to review “ಸುಸ್ಥಿರ ಕೃಷಿ ಪಾಠಗಳು”

Your email address will not be published. Required fields are marked *