10%

ಬೇಸಾಯದ ಕಲೆ ಸಮೃದ್ಧ ಕೃಷಿ ಪ್ರಯೋಗಗಳು

ಲೇಖಕರು : ಸುರೇಶ ದೇಸಾಯಿ
ನಿರೂಪಣೆ : ವಿ. ಗಾಯತ್ರಿ
ಪ್ರಕಾಶನ : ಇನ್ಸ್ಟಿಟ್ಯೂಟ್ ಫಾರ್ ಕಲ್ಚರಲ್ ರಿಸರ್ಚ್ ಅಂಡ್ ಆಕ್ಷನ್ (ಇಕ್ರಾ)

108.00 120.00

In stock

Add to wishlist Adding to wishlist Added to wishlist

ಬೇಸಾಯದ ಕಲೆ ಸಮೃದ್ಧ ಕೃಷಿ ಪ್ರಯೋಗಗಳು | Besayada Kale Samruddha Krushi Prayogagalu

Author : Suresh Desai

Compiled by V.Gayatri

Published by Institute for Cultural Research and Action (ICRA)

**

ನಾನು ಇತ್ತೀಚೆಗೆ ಕೃಷಿ ವಿಶ್ವವಿದ್ಯಾಲಯವೊಂದರ ಸಲಹಾ ಸಮಿತಿ ಸಭೆಗೆ ಹೋಗಿದ್ದೆ. ನನ್ನಂತೆಯೇ ಕೆಲ ಆಹ್ವಾನಿತ ರೈತರು ಅಲ್ಲಿದ್ದರು. ಚರ್ಚೆ ಬಿರುಸಾಗಿತ್ತು. ಒಬ್ಬ ರೈತ ತಾನು ಒಂಬತ್ತು ವರ್ಷದಿಂದ ಟ್ರೈಕೊಡರ್ಮ ಬಳಸುತ್ತಿದ್ದರೂ ಏನೇನೂ ಪ್ರಯೋಜನವಾಗಿಲ್ಲ, ವಿಜ್ಞಾನಿಗಳು ವಿನಾಕಾರಣ ರೈತರನ್ನು ಹಾದಿ ತಪ್ಪಿಸುತ್ತ ಇದ್ದಾರೆಂದು ಕಟುವಾಗಿ ಆರೋಪಿಸಿದೆ. ವೀಸಿ ಅವರನ್ನೂ ಒಳಗೊಂಡಂತೆ ಎಲ್ಲರೂ ತಪ್ರೊಪ್ಪಿಕೊಂಡಂತೆ ಮೌನವಾಗಿದ್ದರು. ನಾನು ವಿಚಾರಿಸಿದಾಗ ಆತನಿಗೆ ಬೆಳೆ ಪರಿವರ್ತನೆ ಮಾಡುವ, ಮಿಶ್ರಬೆಳೆಗಳನ್ನು ಬೆಳೆಯುವ ಯಾವ

ಅಭ್ಯಾಸವೂ ಇಲ್ಲ ಎಂದು ಗೊತ್ತಾಯಿತು. ಬೇಸಾಯದ ಬಗ್ಗೆ ಈ ಮಟ್ಟದ ಉದಾಸೀನತೆ ಬೆಳೆಸಿಕೊಂಡ ರೈತನಿಗೆ ಟ್ರೈಕೊಡರ್ಮ ಏಕೆ, ಅಮೃತವೂ ವಿಷವಾದೀತು. ರೈತನ ಹೊಲಕ್ಕಿಂತ ದೊಡ್ಡ ಪ್ರಯೋಗಶಾಲೆ ಯಾವುದೂ ಇಲ್ಲ ಎಂದು ಸುರೇಶ ದೇಸಾಯಿಯವರಂತಹ ಧೀಮಂತ ರೈತರು ತೋರಿಸಿಕೊಟ್ಟಿದ್ದಾರೆ. ನಿಮ್ಮ

ಹೊಲದಲ್ಲಿ ಒಂದೊಂದು ಹಂಗಾಮನ್ನೂ ಒಂದೊಂದು ಸಂಶೋಧನಾ ಪ್ರಾಜೆಕ್ಟ್ ಆಗಿ ಹೇಗೆ ಪರಿವರ್ತಿಸಬಹುದು ಎಂಬುದನ್ನು ಪ್ರತ್ಯಕ್ಷ ಮಾಡಿ ತೋರಿಸಿದ್ದಾರೆ. ಹೊಸ ಪ್ರಯೋಗವೊಂದನ್ನು ಕೈಗೆತ್ತಿಕೊಂಡು ಪರಿಪೂರ್ಣತೆ ಸಾಧಿಸುವುದು ಹೇಗೆ ಎಂದು ರೈತರಿಗೆ ಪಾಠ ಮಾಡುತ್ತಾರೆ. ಪರಿಪೂರ್ಣತೆ ದಕ್ಕಿದ ಮೇಲೆಯೇ ರೈತರೊಟ್ಟಿಗೆ ಹಂಚಿಕೊಳ್ಳುತ್ತಾರೆ. ನಾನು ಅವರ ಅನೇಕ ಉಪನ್ಯಾಸಗಳನ್ನು ಕೇಳಿದ್ದೇನೆ, ಅವರ ಲೇಖನಗಳನ್ನು ಒಂದೂ ಬಿಡದೆ ಓದಿದ್ದೇನೆ. ಅವರ ವೈಜ್ಞಾನಿಕ ಮನೋಭಾವ, ಸೂಕ್ಷ್ಮವಾಗಿ ವಿಚಾರ ಮಾಡುವ ರೀತಿಗಳನ್ನು ಕಂಡು ಅಚ್ಚರಿಪಟ್ಟಿದ್ದೇನೆ. ತನ್ನ ಪ್ರಯೋಗಗಳ ಲಾಭ ತನ್ನಲ್ಲೇ ಉಳಿಯಕೂಡದೆಂದು ಎಲ್ಲಾ ರೈತರಿಗೂ ಹಂಚುವ ಆ ದೊಡ್ಡ ಮನಸ್ಸು ಅತಿ ವಿರಳ. ಅಗಾಧ ಜ್ಞಾನದ ಗಣಿಯಾದರೂ ಸರ್ವರೊಳು ಒಂದಾಗಿ ಇದ್ದುಬಿಡುವ ಅವರ ಸಜ್ಜನಿಕೆ ನನಗೆ ಭರಮಗೌಡ್ರರನ್ನು ನೆನಪಿಸುತ್ತದೆ.

ಹಿಂದಿನಿಂದಲೂ ತೊಗರಿ ಬೆಳೆಯಲ್ಲಿ ಕುಡಿ ಚಿವುಟುತ್ತಾ ಬಂದಿರುವ ನನಗೆ ಸುರೇಶ ದೇಸಾಯಿಯವರಿಂದ ಅದರ ವೈಜ್ಞಾನಿಕ ವಿವರಣೆ, ತಾಂತ್ರಿಕ ನಿಖರತೆಯ ಬಗ್ಗೆ ಕೇಳಿದ ಮೇಲೆ ಹೊಸ ಹೊಳಹುಗಳೇ ಕಂಡವು, ಸೂರ್ಯಪ್ರಕಾಶದ ಚಮತ್ಕಾರ ಅರಿತ ಮೇಲೆ ಸಾಲುಗಳ ಅಂತರವನ್ನು ಹೆಚ್ಚಿಸಿದೆ. ತೊಗರಿಯ ಜೊತೆ ಉದ್ದು, ಕುಸುಬಿಗಳಲ್ಲೂ ಕುಡಿ ಚಿವುಟತೊಡಗಿದೆ. ಈಗ ಎಲ್ಲ ಬೆಳೆಗಳಲ್ಲೂ 30 ಪ್ರತಿಶತ ಇಳುವರಿ ಹೆಚ್ಚಾಗಿದೆ. ಇಂತಹ ರೈತೋಪಕಾರಿ ಹತ್ತು ಹಲವು ಪ್ರಯೋಗಗಳು ಅವರ ಬತ್ತಳಿಕೆಯಲ್ಲಿದೆ.

ಸುರೇಶ ದೇಸಾಯಿಯವರ ಎಲ್ಲಾ ಪ್ರಯೋಗಗಳನ್ನು ಒಗ್ಗೂಡಿಸಿ ಪುಸ್ತಕ ತರುತ್ತಿರುವ ಇಕ್ರಾಗೆ ನನ್ನ ಹೃದಯಪೂರ್ವಕ ಧನ್ಯವಾದಗಳು,

ಸೋಮನಾಥರೆಡ್ಡಿ ಪೂರ್ಮಾ

 

Reviews

There are no reviews yet.

Be the first to review “ಬೇಸಾಯದ ಕಲೆ ಸಮೃದ್ಧ ಕೃಷಿ ಪ್ರಯೋಗಗಳು”

Your email address will not be published. Required fields are marked *