ಪ್ರತಿದಿನ ಪರಿಸರ ದಿನ | Pratidina Parisara Dina
ಪ್ರತಿದಿನವೂ ಪರಿಸರ ದಿನ ಜೋಗದ ಸಿರಿಬೆಳಕು, ತುಂಗೆಯ ತೆನೆ ಬಳುಕು, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕು – ಈ ಯಾವುವೂ ತಮ್ಮ ವೈಭವವನ್ನು ಉಳಿಸಿಕೊಂಡಿಲ್ಲ.
+ ಕನ್ನಡ ನಾಡಿನ ಸಾಮೂಹಿಕ ಆಸ್ತಿಗಳನ್ನು ಇನ್ನಷ್ಟು ಸಮೃದ್ಧಗೊಳಿಸಲು ಆಗದಿದ್ದರೆ ಕಡೇಪಕ್ಷ ಶಿಥಿಲಗೊಳ್ಳದಂತೆ ಕಾಪಾಡಬಲ್ಲವರು ನಮಗಿಂದು ಬೇಕಾಗಿದ್ದಾರೆ.
+ ಸರುಕು ಸಂಸ್ಕೃತಿಯ ಅಗರವಾಗಿರುವ ನಗರಗಳು ತಮ್ಮ ತಿಪ್ಪೆಯನ್ನು ಗ್ರಾಮಪರಿಸರಕ್ಕೆ ಸುರಿಯದಂತೆ ತಡೆಯಬಲ್ಲವರು ಬೇಕಾಗಿದ್ದಾರೆ. ಅರಣ್ಯ, ಕಡಲತೀರ, ಕೆರೆತೊರೆಗಳ ಜೀವಿವೈವಿಧ್ಯಗಳನ್ನು ಸಂರಕ್ಷಿಸುವವರು ಬೇಕಾಗಿದ್ದಾರೆ.
+ ಅಂಥ ಹೊಸ ಪೀಳಿಗೆಯೊಂದನ್ನು ಸೃಷ್ಟಿಸಬೇಕಾದ ತುರ್ತಿನಲ್ಲಿರುವ ನಾವು ವರ್ಷದ ಕೇವಲ ಒಂದು ದಿನವನ್ನು ‘ಪರಿಸರ ದಿನ’ವನ್ನಾಗಿ ಆಚರಿಸಿದರೆ ಸಾಕೆ?
Reviews
There are no reviews yet.