ಬಾರಯ್ಯ ಮಮ ಬಂಧು | Barayya Mama Bandhu
ಪಿತೃಪ್ರಧಾನತೆಯು ಹೇಳುವ ‘ಪುರುಷತ್ವ’ವು ಅಹಂಕಾರವೆನಿಸಿ ಮರೆದಾಗ ಪುರುಷರಿಗೆ ಕೆಲವು ಸಾಮಾಜಿಕ ಅಧಿಕಾರ/ಸವಲತ್ತುಗಳು ದೊರೆತಂತೆ ತೋರಬಹುದು. ಆದರೆ ಅದಕ್ಕಾಗಿ ಅವರು ಪ್ರೀತಿಸುವ/ಪ್ರೀತಿಯನ್ನು ಪಡೆಯುವ ಭಾವವನ್ನೇ ನಿರಾಕರಿಸ ಬೇಕಾಗುತ್ತದೆ. ಪ್ರೀತಿ ಇಲ್ಲದ ಬದುಕು ಎಂದಿಗೂ ಸಮಗ್ರ ಎನಿಸದು. ಪುರುಷತ್ವವು ಮೂಲತಃ ವಿಕೃತ ವಲ್ಲ. ಸಹಜವೂ, ಸುಂದರವೂ, ಪ್ರೀತಿಯ ಮೂಲಸೆಲೆಯೂ ಆದ ಪುರುಷತ್ವವನ್ನು ಗುರುತಿಸುವ ದಾರಿಗಳನ್ನು ಸ್ತ್ರೀವಾದವು ಹೇಳುತ್ತದೆ. ಬಾರಯ್ಯ ಮಮ ಬಂಧು ಎಂಬ ಕರೆಯನ್ನು ನೀಡುವ ಒಂದು ಸ್ತ್ರೀವಾದೀ ನೀಲನಕ್ಷೆಯನ್ನು ಬೆಲ್ ಹುಕ್ಸ್ ನೀಡುತ್ತಾಳೆ.
Reviews
There are no reviews yet.